*ಲಾಠಿ ಚಾರ್ಜ್ ವೇಳೆ 15 ಪೊಲೀಸರಿಗೆ, 10 ಲಿಂಗಾಯತ ಹೊರಾಟಗಾರರಿಗೆ ಗಾಯ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಳೆದು ಹಲವಾರು ವರ್ಷಗಳಿಂದ 2A ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ಮಾಡ್ತಾ ಇದೆ. ಹೀಗಾಗಿ ಸದ್ಯ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನ ವೇಳೆ ಸುವರ್ಣಸೌದಕ್ಕೆ ಟ್ರಾಕ್ಟರ್ ತೆಗೆದುಕೊಂಡು ಮುತ್ತಿಗೆ ಹಾಕುವ ವೇಳೆ ಪೋಲಿಸ್ ಹಾಗೂ ಹೋರಾಟಗಾರ ನಡುವೆ ಭಾರೀ ಘರ್ಷಣೆಯಾಗಿ ಲಾಠಿ ಚಾರ್ಜ್ ಕೂಡಾ ಆಗಿತ್ತು.
ಸುವರ್ಣವಿಧಾನಸೌಧದ ಮುಂದೆ ನಡೆದ ಪಂಚಮಸಾಲಿ ಹೋರಾಟದ ವೇಳೆ ಲಾಠಿ ಚಾರ್ಜ್ ನ ಗಲಾಟೆಯಲ್ಲಿ ಪಿಎಸ್ ಐ ಸೇರಿ 15ಕ್ಕೂ ಜನ ಪೋಲಿಸರಿಗೆ ತೀವ್ರ ಗಾಯವಾಗಿದೆ. ಗಾಯಾಳುಗಳನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆ ಗೆ ದಾಖಲಿಸಿ ಚಿಕಿತ್ಸೆ ನಡೆಯುತ್ತಿದೆ. ಇನ್ನು ಈ
ಪ್ರತಿಭಟನೆ ವೇಳೆ ಕಲ್ಲು ತೂರಾಟ, ನೂಕುನುಗ್ಗಲು ವೇಳೆ ಗಾಯಕ್ಕೆ ಪ್ರತಿಭಟನೆ ನಿರತ 10ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ.
ಇನ್ನೂ ಜಿಲ್ಲಾಸ್ಪತ್ರೆಗೆ ಶ್ರೀಗಳು ಹಾಗೂ ಲಿಂಗಾಯತ ಮುಖಂಡರು ಭೇಟಿ ನೀಡಿ ಪೊಲೀಸರ ಹಾಗೂ ಪ್ರತಿಭಟನಾಕಾರರ ಆರೋಗ್ಯ ವಿಚಾರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ