World

*ಮುದುವೆಗೆ ಹೊದ 16 ಜನ ದರ್ಮರಣ*

ಪ್ರಗತಿವಾಹಿನಿ ಸುದ್ದಿ : ಮದುವೆಗೆ ಹೊರಟಿದ್ದ ಬಸ್ ಅಪಘಾತಕ್ಕೀಡಾಗಿದೆ. ಮಧುಮಗಳು ಗಾಯಗೊಂಡು, 16 ಮಂದಿ ಸಾವನಪ್ಪಿದ್ದರೆ ಹಲವರು ನಾಪತ್ತೆಯಾರುವ ಘಟನೆ ನೆರೆಯ ಪಾಕಿಸ್ತಾನದಲ್ಲಿ ಸಂಭವಿಸಿದೆ.

ಇಂಡಸ್ ನದಿ ತೀರದ ಡೈಮರ್ ಜಿಲ್ಲೆಯ ಬಳಿ ದುರಂತ ಸಂಭವಿಸಿದೆ. 16 ಮಂದಿ ನದಿಯೊಳಗೆ ಬಿದ್ದು, ಜಲಸಮಾಧಿಯಾಗಿದ್ದು, ಗಿಲಿಟ್- ಬಾಲ್ಟಿಸ್ಥಾನ್ ನಡುವಿನ ಪರ್ವತ ಶ್ರೇಣಿಯ ಮಧ್ಯೆ ಅಪಘಾತ ನಡೆದಿದೆ.

16 ಮೃತದೇಹಗಳನ್ನ ಹೊರ ತೆಗೆಯಲಾಗಿದೆ. ಉಳಿದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಇನ್ನು ಬಸ್ ನಲ್ಲಿದ್ದ ಮಧುಮಗಳಿಗೂ ಗಂಭೀರಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇತ್ತೀಚೆಗೆ ಈ ಭಾಗದಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗಿ ನಡೆಯುತ್ತಿದೆ. ಹದಗೆಟ್ಟ ರಸ್ತೆಗಳು, ಓವ‌ರ್ ಲೋಡೆಡ್ ವೆಹಿಕಲ್ಸ್ ಟ್ರಾಫಿಕ್ ನಿಯಮ ಉಲ್ಲಂಘನೆಯಿಂದ ಅವಘಡ ಸಂಭವಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button