Karnataka News

ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ : ಮತ್ತೋರ್ವನ ಬಂಧನ

ಪ್ರಗತಿ ವಾಹಿನಿ ಸುದ್ದಿ, ಗೋಕಾಕ:  ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ ಪ್ರಕರಣ ಬಗೆದಷ್ಟೂ ಆಳವಾಗುತ್ತಲೇ ಸಾಗಿದೆ. ಪ್ರಕರಣದಲ್ಲಿ ಆರೋಪಿಗಳ ಪಟ್ಟಿಯೂ ಹನುಮಂತನ ಬಾಲದಂತೆ ಬೆಳೆಯುತ್ತಲೇ ಸಾಗಿದೆ.

ಈಗಾಗಲೇ ಸುಮಾರು 48 ಆರೋಪಿಗಳನ್ನು ಸೆರೆ ಹಿಡಿದಿರುವ ಗೋಕಾಕ ಪೊಲೀಸರು ಗುರುವಾರ ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ. ಕಲಬುರ್ಗಿ ಜಿಲ್ಲೆ ಅಳಂದ ತಾಲೂಕಿನ ದರ್ಗಾಶಿರೂರು ಗ್ರಾಮದ ಶಿವರಾಜ ಲಕ್ಷ್ಮೀಪುತ್ರ (28) ಬಂಧಿಸಲ್ಪಟ್ಟ ಆರೋಪಿ.

Home add -Advt

ಈತ 2022ರ ಆ.7ರಂದು ಎಲೆಕ್ಟ್ರಾನಿಕ್ ಡಿವೈಸ್ ಮತ್ತು ಮೈಕ್ರೊ ಚಿಪ್ ತೆಗೆದುಕೊಂಡು ಹೋಗಿ ಕೆಪಿಟಿಸಿಎಲ್ ಜ್ಯೂನಿಯರ್ ಅಸಿಸ್ಟೆಂಟ್ ಪರೀಕ್ಷೆಯನ್ನು ಬರೆದಿದ್ದ.

 

ಆರೋಪಿಯಿಂದ ಮೈಕ್ರೊ ಚಿಪ್, ಮೊಬೈಲ್ ಮೊದಲಾದವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

*5 ಲಕ್ಷ ಜನರಿಗೆ ಸ್ವಯಂ ಉದ್ಯೋಗಕ್ಕೆ ಯೋಜನೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

Related Articles

Back to top button