Cancer Hospital 2
Beereshwara 36
LaxmiTai 5

*ಒಂದು ಬಾರಿ ಪರಿಹಾರ ಯೋಜನೆಯಡಿ 22 ಕೋಟಿ ರೂ ತೆರಿಗೆ ಸಂಗ್ರಹ*

Anvekar 3

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಮಹದೇವಪುರ ವಲಯ ವ್ಯಾಪ್ತಿಯಲ್ಲಿ  ಮೆ. ಸ್ಯಾಪ್ ಲ್ಯಾಬ್ ಇಂಡಿಯಾ ಪ್ರೈವೇಟ್ ಲಿ. ಸಂಸ್ಥೆಯಿಂದ ವಲಯ ಜಂಟಿ ಆಯುಕ್ತರಾದ ಡಾ. ದಾಕ್ಷಾಯಿಣಿರವರ ನೇತೃತ್ವದಲ್ಲಿ ಇಂದು ಒಂದು ಬಾರಿ ಪರಿಹಾರ ಯೋಜನೆಯಡಿ 22 ಕೋಟಿ ರೂ. ತೆರಿಗೆ ಸಂಗ್ರಹ ಮಾಡಲಾಗಿದೆ. 

Emergency Service

ಮಹದೇವಪುರ ವಲಯದ ಗರುಡಾಚಾರ್ ಪಾಳ್ಯ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಸ್ವತ್ತಿನ ಸಂಖ್ಯೆ 138, 138ಪಿ, ಇ.ಪಿ.ಐ.ಪಿ ಕೈಗಾರಿಕಾ ಪ್ರದೇಶದಲ್ಲಿರುವ ಮೆ. ಸ್ಯಾಪ್ ಲ್ಯಾಬ್ 2008-09 ರಿಂದ 2023-24 ರವರೆಗೆ ತಪ್ಪಾದ ವರ್ಗ ಮತ್ತು ಕಡಿಮೆ ದರದಡಿಯಲ್ಲಿ ಆಸ್ತಿ ತೆರಿಗೆಯನ್ನು ಪಾವತಿಸಿದ್ದರು. ಈ ಸಂಬಂಧ ಸರಿಯಾದ ವರ್ಗದ ಪ್ರಕಾರ ಆಸ್ತಿ ತೆರಿಗೆಯನ್ನು ಒಂದು ಬಾರಿ ಪರಿಹಾರ ಯೋಜನೆಯಡಿ ಪಾಲಿಕೆಗೆ ಪಾವತಿಸಲು ಸಂಸ್ಥೆಗೆ ತಿಳುವಳಿಕೆ ಪತ್ರ ನೀಡಲಾಗುತ್ತು. ಅದರಂತೆ, ಇಂದು ಪಾಲಿಕೆಗೆ ಪಾವತಿಸಬೇಕಿದ್ದ 22 ಕೋಟಿ ರೂ.(22,00,13,386/-) ಆಸ್ತಿ ತೆರಿಗೆಯನ್ನು ಒಂದು ಬಾರಿ ಪರಿಹಾರ ಯೋಜನೆಯಡಿ ಡಿಡಿ ಮೂಲಕ ನೀಡಿರುತ್ತಾರೆ.

ಈ ವೇಳೆ ವಲಯ ಉಪ ಆಯುಕ್ತರಾದ ಎಸ್.ಬಿ ಮಧು, ಕಂದಾಯ ಪರಿವೀಕ್ಷಕರಾದ ಶಿವದರ್ಶನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Bottom Add3
Bottom Ad 2