Latest

ಅರಬ್ಬಿ ಸಮುದ್ರದಲ್ಲಿ 24 ಮೀನುಗಾರರ ರಕ್ಷಣೆ

 

 

ಪ್ರಗತಿವಾಹಿನಿ ಸುದ್ದಿ; ಕಾರವಾರ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಪರ್ಷಿಯನ್ ಬೋಟ್ ಬಿರುಗಾಳಿಗೆ ಸಿಲುಕಿ ಇಂಜಿನ್ ಕೆಟ್ಟುಹೋಗಿದ್ದು ಬೋಟ್ ನಲ್ಲಿದ್ದ 24 ಜನ ಮೀನುಗಾರರನ್ನು ಮಂಗಳೂರು ಕೋಸ್ಟ್ ಗಾರ್ಡ ಸಿಬ್ಬಂದಿಗಳು ರಕ್ಷಿಸಿದ್ದಾರೆ.

ಭಟ್ಕಳದ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಕಮರುಲ್ ಬಾಹರ್ ಬೋಟ್ ಭಟ್ಕಳ-ಹೊನ್ನಾವರ ನಡುಭಾಗದ ಅರಬ್ಬಿ ಸಮುದ್ರದಲ್ಲಿ ಬಿರುಗಾಳಿಗೆ ಸಿಲುಕಿ ಬೋಟ್ ನ ಇಂಜಿನ್ ಕೆಟ್ಟುಹೋಗಿತ್ತು. ಈ ವೇಳೆ ಬಿರುಗಾಳಿ ಅಲೆಗಳ ಅಬ್ಬರದಿಂದ ಬೋಟ್ ಮುಳುಗುವ ಸ್ಥಿತಿಯಲ್ಲಿದ್ದು ಅದರಲ್ಲಿದ್ದ 24 ಜನ ಮೀನುಗಾರರು ಸಂಕಷ್ಟಕ್ಕೊಳಗಾಗಿದ್ದರು.

ವಿಷಯ ತಿಳಿದ ಕೋಸ್ಟ್ ಗಾರ್ಡ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಆಗಮಿಸಿ ಮೀನುಗಾರರನ್ನು ಹಾಗೂ ಬೋಟ್ ಅನ್ನು ರಕ್ಷಿಸಿ ಕಾರವಾರದ ಬಂದರಿಗೆ ಕರೆತಂದಿದ್ದಾರೆ.

Related Articles

Back to top button