Latest

ಡ್ರಗ್ಸ್ ದಂಧೆಯಲಿ ಯಾರದೇ ಹೆಸರು ಕೇಳಿಬಂದರೂ ತನಿಖೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಡ್ರಗ್ ದಂಧೆ ವಿರುದ್ಧ ನಿರಂತರ ಹೋರಾಟ ಮಾಡುತ್ತಿದ್ದೇವೆ. ಯಾವುದೇ ಮೂಲಗಳಿಂದ ಮಾಹಿತಿ ಬಂದರೂ ಗಂಭೀರವಾಗಿ ಪರಿಗಣಿಸಲು ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ಮಾಫಿಯಾ ವಿಚಾರವಾಗಿ ಯಾರದೇ ಹೆಸರು ಕೇಳಿಬಂದರೂ ಕೂಡ ಹಾಗೂ ಮಾಧ್ಯಮಗಳಲ್ಲಿ ಬರುವ ಸುದ್ದಿಗಳನ್ನೂ ಪರಿಗಣಿಸುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ಈ ವಿಚಾರದಲ್ಲಿ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

Home add -Advt

ಡ್ರಗ್ಸ್ ಪ್ರಕರಣ ವಿಚಾರಣೆಯಲ್ಲಿ ಇಡಿ ಎಂಟ್ರಿ ಕುರಿತು ಮಾತನಾಡಿದ ಅವರು, ಡ್ರಗ್ಸ್ ದಂಧೆಯಲ್ಲಿ ಹಣಕಾಸು ಆಯಾಮವೂ ಇದೆ. ದೇಶದ ಹೊರಗೂ ಇವರು ಸಂಬಂಧಗಳನ್ನೂ ಹೊಂದಿರುವ ಶಂಕೆ ಇದೆ. ಇತರೇ ವ್ಯವಹಾರಗಳನ್ನು ನಡೆಸುವವರ ಜೊತೆ, ಹವಾಲಾ ಸಂಬಂಧವೂ ಇದೆ. ಹೀಗಾಗಿ ಈ ಎಲ್ಲ ಆಯಾಮಗಳನ್ನು ಪೂರ್ಣವಾಗಿ ತನಿಖೆ ನಡೆಸಲು ಇಡಿಯವರು ಬಂದಿದ್ದಾರೆ ಎಂದರು.

Related Articles

Back to top button