Kannada NewsKarnataka News

ಸೋಮವಾರದಿಂದ 3 ದಿನ ಸಿದ್ದರಾಮಯ್ಯ ಪ್ರವಾಹ ಸಮೀಕ್ಷೆ

ಸೋಮವಾರದಿಂದ 3 ದಿನ ಸಿದ್ದರಾಮಯ್ಯ ಪ್ರವಾಹ ಸಮೀಕ್ಷೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ಕಣ್ಣಿನ ಶಸ್ತ್ರಚಿಕಿತ್ಸೆ ಕಾರಣದಿಂದ ಪ್ರವಾಹ ಸಂದರ್ಭದಲ್ಲಿ ಉತ್ತರ ಕರ್ನಾಟಕದತ್ತ ಸುಳಿಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರದಿಂದ 3 ದಿನ ಉತ್ತರ ಕರ್ನಾಟಕ ಪ್ರವಾಸ ಮಾಡಲಿದ್ದಾರೆ.

Home add -Advt

ಸೋಮವಾರ ಬೆಳಗ್ಗೆ 9 ಗಂಟೆಗೆ ಹುಬ್ಬಳ್ಳಿಗೆ ಆಗಮಿಸುವ ಅವರು ಧಾರವಾಡ, ಸವದತ್ತಿ, ರಾಮದುರ್ಗ ಮಾರ್ಗವಾಗಿ 11.45ಕ್ಕೆ ಮುಧೋಳಕ್ಕೆ ತೆರಳಲಿದ್ದಾರೆ. ಮುಧೋಳ ವಿಧಾನಸಭಾ ಕ್ಷೇತ್ರದ ಪ್ರವಾಹ ಪೀಡಿತ ಪ್ರದೇಶಗಳ ಸಮೀಕ್ಷೆ ನಡೆಸುವ ಅವರು 1.30ಕ್ಕೆ ತೇರದಾಳ, 3.30ಕ್ಕೆ ಜಮಖಂಡಿ ವಿಧಾನಸಭಾ ಕ್ಷೇತ್ರದ ಸಮೀಕ್ಷೆ ನಡೆಸಲಿದ್ದಾರೆ.

ರಾತ್ರಿ ಜಮಖಂಡಿಯಲ್ಲಿ ವಾಸ್ತವ್ಯ ಮಾಡುವ ಸಿದ್ದರಾಮಯ್ಯ ಮಂಗಳವಾರ ಬೆಳಗ್ಗೆ 10 ಗಂಟೆಗೆ ಅಥಣಿಗೆ ಆಗಮಿಸಿ ಕ್ಷೇತ್ರದ ಸಮೀಕ್ಷ ನಡೆಸುವರು. 1 ಗಂಟೆಗೆ ಕಾಗವಾಡ, 2.30ಕ್ಕೆ ಚಿಕ್ಕೋಡಿ-ಸದಲಗಾ ಹಾಗೂ 5 ಗಂಟೆಗೆ ನಿಪ್ಪಾಣಿ ವಿಧಾನಸಭಾ ಕ್ಷೇತ್ರದ ಸಮೀಕ್ಷೆ ನಡೆಸಿ ರಾತ್ರಿ ಬೆಳಗಾವಿಯಲ್ಲಿ ವಾಸ್ತವ್ಯ ಮಾಡಲಿದ್ದಾರೆ.

ಬುಧವಾರ ಬೆಳಗ್ಗೆ 10 ಗಂಟೆಗೆ ಗೋಕಾಕ ವಿಧಾನಸಭಾ ಕ್ಷೇತ್ರದ ಸಮೀಕ್ಷೆ ನಡೆಸಲಿದ್ದಾರೆ. 4 ಗಂಟೆಗೆ ರಾಮದುರ್ಗಕ್ಕೆ ತೆರಳಿ ಸಮೀಕ್ಷೆ ನಡೆಸಿ ಸಂಜೆ ಬೆಳಗಾವಿಯಿಂದ ವಿಮಾನದ ಮೂಲಕ ಬೆಂಗಳೂರಿಗೆ ತೆರಳುವರು.

Related Articles

Back to top button