Latest

ರಾಜ್ಯದಲ್ಲಿ ಇಂದು 36 ಜನರಿಗೆ ಹೊಸದಾಗಿ ಸೋಂಕು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಇಂದು 36 ಜನರಿಗೆ ಕೊರೋನಾ ಸೋಂಕು ತಗುಲಿದ್ದು, ಒಟ್ಟೂ ಸೋಂಕಿತರ ಸಂಖ್ಯೆ 789ಕ್ಕೇರಿದೆ.

ದಾವಣಗೆರೆ 6, ಬೆಂಗಳೂರು 12, ಭಟ್ಕಳದಲ್ಲಿ 7, ಬೀದರ್ ನಲ್ಲಿ 3, ದಕ್ಷಿಣ ಕನ್ನಡದಲ್ಲಿ 3, ಚಿತ್ರದುರ್ಗದಲ್ಲಿ 3, ವಿಜಯಪುರ ಹಾಗೂ ತುಮಕೂರಿನಲ್ಲಿ ತಲಾ 1 ಸೋಂಕು ಪತ್ತೆಯಾಗಿದೆ.

ಭಟ್ಕಳದಲ್ಲಿ ನಿನ್ನೆ 12 ಜನರಿಗೆ ಸೋಂಕು ಪತ್ತೆಯಾಗಿತ್ತು. ಇಂದು ಮತ್ತೆ 10 ಜನರಿಗೆ ಸೋಂಕು ತಗುಲಿದೆ.

ಬೆಂಗಳೂರಿನ ಪಾದರಾಯನಪುರದಲ್ಲಿ 7 ಜನರಿಗೆ ಸೋಂಕು ತಗುಲಿದೆ. ಬೆಳಗಾವಿಯಲ್ಲಿ ಇಂದು ಹೊಸದಾಗಿ ಯಾರಿಗೂ ಸೋಂಕು ಪತ್ತೆಯಾಗಿಲ್ಲ.

ಭಟ್ಕಳದಲ್ಲಿ 1.5 ವರ್ಷದ ಗಂಡು ಮಗು ಹಾಗೂ 2.6 ವರ್ಷದ ಹೆಣ್ಣು ಮಗುವಿಗೆ ಸೋಂಕು ಪತ್ತೆಯಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button