Kannada NewsKarnataka NewsLatest

*ಐದು ಹುಲಿಗಳ ಸಾವು ಪ್ರಕರಣ: ಇಬ್ಬರು ಆರೋಪಿಗಳು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಐದು ತಾಯಿ ಹುಲಿ ಸೇರಿ ಐದು ಹುಲಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲಿಸರು ಬಂಧಿಸಿದ್ದಾರೆ.

ಮಾದ ಅಲಿಯಾಸ್ ಮಾದುರಾಅಜು ಹಾಗೂ ನಾಗರಾಜ್ ಬಂಧಿತ ಆರೋಪಿಗಳು. ಮಾದ ಅಲಿಯಾಸ್ ಮಾದುರಾಜುಗೆ ಸೇರಿದ ಹಸುವನ್ನು ಹುಲಿ ಬಲಿಪಡೆದಿತ್ತು. ಇದರಿಂದ ತೀವ್ರವಾಗಿ ನೊಂದಿದ್ದ ಮಾದ ತನ್ನ ನೋವನ್ನು ನಾಗರಾಜ್ ಬಳಿ ಹೇಳಿಕೊಂಡಿದ್ದನಂತೆ. ಹಸು ಬಲಿ ಪಡೆದಿದ್ದ ಹುಲಿಯನ್ನು ಕೊಲ್ಲಲು ಇಬ್ಬರೂ ಸೇರಿ ನಿರ್ಧರಿಸಿದ್ದರು. ಹಾಗಾಗಿ ಹುಲಿ ಕೊಲ್ಲಲು ಇಬ್ಬರೂ ಕ್ರಿಮಿನಾಶಕವನ್ನು ತಂದಿದ್ದರು. ಬಳಿಕ ಮೃತ ಹಸುವಿನ ಮೇಲೆ ಕ್ರಿಮಿನಾಶಕಹಾಕಿ ಬಂದಿದ್ದರು.

Home add -Advt

ಮರುದಿನ ನೋಡಿದಾದ ವಿಷಪೂರಿತ ಹಸುವಿನ ಮಾಂಸ ತಿಂದು ಹುಲಿ ಹಾಗೂ ಹುಲಿ ಮರಿಗಳು ಸಾವನ್ನಪ್ಪಿದ್ದವು ಎಂದು ಬಮ್ಧಿತರು ವಿಚಾರಣೆ ವೇಳೆ ತಿಳಿಸಿದ್ದಾರೆ. ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

ಮಲೆ ಮಹದೇಶ್ವರ ವನ್ಯಧಾಮದ ಹೂಗ್ಯಂ ವನ್ಯಜೀವಿ ವಲಯದ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ತಾಯಿ ಹುಲಿ ಹಾಗೂ ನಾಲ್ಕು ಹುಲಿ ಮರಿಗಳು ಸಾವನ್ನಪ್ಪಿದ್ದವು. ಹುಲಿಗಳ ಮೃತದೇಹದ ಬಳಿಯೇ ಹಸುವಿನ ಕಳೆಬರಹ ಕೂಡ ಪತ್ತೆಯಾಗಿತ್ತು. ವಿಶ್ರಪ್ರಾಶನ ಮಾಡಿ ಹುಲಿಗಳು ಸಾವನ್ನಪ್ಪಿವೆ ಎಂಬುದು ಪ್ರಾಥಮಿಕ ತನಿಖೆಯಲ್ಲಿಯೇ ತಿಳಿದುಬಂದಿತ್ತು. ಇದೀಗ ಹಸು ಬಲಿಪಡೆದ ಹುಲಿ ಕೊಲ್ಲಲು ಹೋಗಿ ಐದು ಹುಲಿಗಳು ಸಾವನ್ನಪ್ಪಿವೆ ಎಂಬುದು ದೃಢವಾಗಿದೆ.


Related Articles

Back to top button