Kannada NewsKarnataka NewsLatest
*ಕೆಮ್ಮು-ಕಫದಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿದ್ದ 6 ವರ್ಷದ ಬಾಲಕಿ ಸಾವು*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ತೀವ್ರ ಕೆಮ್ಮು, ಕಫದಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿದ್ದ 6 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಆಕಾಶ್ ಆಸ್ಪತ್ರೆಯಲ್ಲಿ ನಡೆದಿದೆ.
6 ವರ್ಷದ ರಾಬಿಯಾ ಮೃತ ಬಾಲಕಿ. ದೇವನಹಳ್ಳಿಯ ವಿಜಯಪುರದ ದಾದಾಫಿರ್, ನಜಿಯಾ ಬಾನು ದಂಪತಿಯ ಪುತ್ರಿ. ಕೆಮ್ಮು ಹಾಗೂ ಕಫದಿಂದ ಬಳಲುತ್ತಿದ್ದ ಬಾಲಕಿಯನ್ನು ಆಕಾಶ್ ಆಸ್ಪತ್ರೆ ದಾಖಲಿಸಲಾಗಿತ್ತು. ಮೂರು ದಿನ ಜನರಲ್ ವಾರ್ಡ್ ನಲ್ಲಿಯೇ ಬಾಲಕಿಗೆ ಚಿಕಿತ್ಸೆ ನೀಡಲಾಗಿತ್ತು.
ಆದರೆ ನಿನ್ನೆ ಸಂಜೆ ಬಾಲಕಿಯನ್ನು ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. ಐಸಿಯುಗೆ ಶಿಫ್ಟ್ ಆದ ಮೂರೇ ಗಂಟೆಯಲ್ಲಿ ಬಾಲಕಿ ಸಾವನ್ನಪ್ಪಿದ್ದಾಳೆ . ವೈದ್ಯರ ನಿರ್ಲಕ್ಷ್ಯವೇ ಬಾಲಕಿ ಸಾವಿಗೆ ಕಾರಣ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.




