Latest

ಕಾಲೇಜು ವಿದ್ಯಾರ್ಥಿಗಳಿದ್ದ ಬಸ್ ಅಪಘಾತ College Bus Accident

ಪ್ರಗತಿವಾಹಿನಿ ಸುದ್ದಿ, ಹೊನ್ನಾವರ: ಕಾಲೇಜು ವಿದ್ಯಾರ್ಥಿಗಳು ಪ್ರವಾಸಕ್ಕೆ ಹೊರಟಿದ್ದ ಬಸ್ ಗುರುವಾರ ತಡ ರಾತ್ರಿ ಹೊನ್ನಾವರದ ರಾಷ್ಟ್ರೀಯ ಹೆದ್ದಾರಿ 69 ರ ಸೂಳೆಮಕ್ಕಿ ಕ್ರಾಸ್ ಬಳಿ ಪಲ್ಟಿಯಾಗಿದೆ.

ಯಾದಗಿರಿ ಜಿಲ್ಲೆ ಶಹಾಪುರದ ಪ್ರಾರ್ಥನಾ ಪಪೂ ಕಾಲೇಜಿನ 50 ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಸೇರಿ 60 ಜನ ಪ್ರವಾಸಕ್ಕೆಂದು ಜೋಗ ಜಲಪಾತಕ್ಕೆ ಬಂದಿದ್ದರು.

Home add -Advt

ಜೋಗ ವೀಕ್ಷಿಸಿ ಹೊನ್ನಾವರದ ಮೂಲಕ ಮುರಡೇಶ್ವರಕ್ಕೆ ತೆರಳುತ್ತಿದ್ದರು. ಸೂಳೆ ಮಕ್ಕಿ ಕ್ರಾಸ್ ಬಳಿ ಬಂದಾಗ ಬಸ್ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ.

ಬಸ್ ನಲ್ಲಿದ್ದ ಕೆಲ ವಿದ್ಯಾರ್ಥಿಗಳಿಗೆ ಗಾಯವಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ. ಗಾಯಾಳುಗಳಿಗೆ ಹೊನ್ನಾವರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಕಿ ಜತೆಗಿನ ಅನಿರೀಕ್ಷಿತ ಪ್ರೇಮ ಪ್ರಸಂಗ ಹಂಚಿಕೊಂಡ ಕತ್ರಿನಾ

Related Articles

Back to top button