Latest

ಪತಿಯಿಂದ ಕೊಲೆಯಾಗಿದ್ದ ಮಹಿಳೆ ನೇಪಾಳದ ತವರಿನಲ್ಲಿ ಜೀವಂತ!

ಪ್ರಗತಿವಾಹಿನಿ ಸುದ್ದಿ, ಪಾಟ್ನಾ: ಒಂದುವರೆ ತಿಂಗಳ ಹಿಂದೆ ಪತಿಯಿಂದ ಕೊಲೆಯಾಗಿದ್ದ ಮಹಿಳೆಯೊಬ್ಬಳು ನೇಪಾಳದ ತನ್ನ ತವರು ಮನೆಯಲ್ಲಿ ಜೀವಂತ ಮತ್ತು ಆರೋಗ್ಯವಾಗಿ ಪತ್ತೆಯಾಗಿದ್ದಾಳೆ.

ಈ ಘಟನ ನಡೆದಿದ್ದು ಬಿಹಾರ ರಾಜ್ಯದ ಚಂಪಾರಣ್ ಜಿಲ್ಲೆಯ ಮತಿಹಣಿಯಲ್ಲಿ. ಬಿಹಾರದ ಚೋರೌಟ್ ಪೊಲೀಸ್ ಠಾಣೆ ವ್ಯಾಪ್ತಿಯ ಪರಿಗಮ ಗ್ರಾಮದ ನಿವಾಸಿ ಶಶಿಕುಮಾರ್ ನೇಪಾಳದ ಮಹೋತ್ರಿ ಜಿಲ್ಲೆಯ ಮತಿಹಣಿ ಗ್ರಾಮದಲ್ಲಿ ಮಹಿಳೆಯನ್ನು ಮದುವೆಯಾಗಿದ್ದರು.

Home add -Advt

ಕೆಲವು ದಿನಗಳ ಹಿಂದೆ ಮತಿಹಣಿ ನಿವಾಸಿ ವಿನೋದ್ ನಾಯಕ್ ಎಂಬುವರು ಚೋರತ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದು, ತಮ್ಮ ಮಗಳು ಹೀರಾದೇವಿಯನ್ನು ಗಂಡ, ಅತ್ತೆ ಹಾಗೂ ಪತಿಯ ಸಹೋದರ ಸೇರಿ ಕೊಲೆ ಮಾಡಿ ಸಜೀವ ದಹನ ಮಾಡಿದ್ದಾರೆ ಎಂದು ಆರೋಪಿಸಿ ಚೋರತ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

FIR ದಾಖಲಾದ ನಂತರ ಪತಿ ಕಡೆಯವರು ತಲೆಮರೆಸಿಕೊಂಡಿದ್ದರು. ಈ ಮಧ್ಯೆ ಪತಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಪ್ರಕರಣದ ಗಂಭೀರತೆ ಅರಿತ ಪೊಲೀಸರು ತನಿಖೆ ಜಾರಿಯಿರಿಸಿದ್ದರು.

ಆದರೆ ಕೊಲೆಯಾಗಿದ್ದಾಳೆ ಎನ್ನಲಾದ ಮಹಿಳೆ ನೇಪಾಳದ ತನ್ನ ತಾಯಿಯ ಮನೆಯಲ್ಲಿ ಪತ್ತೆಯಾಗಿದ್ದಾಳೆ. ಜತೆಗೆ ಆರೋಗ್ಯವಾಗಿದ್ದಾಳೆ. ಪೊಲೀಸರು ಈಕೆಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದು ತನಿಖೆ ಮುಂದುವರಿದಿದೆ.

ಇತಿಹಾಸದಲ್ಲಿಯೇ ಇಂತಹ ದೃಶ್ಯ ನೋಡಿರಲಿಲ್ಲ; ಸಿದ್ದರಾಮಯ್ಯ ಆಕ್ರೋಶ

Related Articles

Back to top button