Kannada NewsLatest

ಮೋದಿ ಸಂಪುಟದಲ್ಲಿ ಸ್ಥಾನ ಪಡೆದ ಕರ್ನಾಟಕದ ಸಂಸದರಿಗೆ ಡಾ.ಪ್ರಭಾಕರ ಕೋರೆ  ಅಭಿನಂದನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಪ್ರಧಾನಿ ನರೇಂದ್ರ ಮೋದಿ 2ನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವುದು ಸಂತೋಷ ಹಾಗೂ ಕರ್ನಾಟಕದ ಮೂವರು ಸಂಸದರಿಗೆ ಸಚಿವ ಸಂಪುಟ ದರ್ಜೆ ಸ್ಥಾನ ನೀಡಿರುವುದು ಹೆಮ್ಮೆಯನ್ನುಂಟು ಮಾಡಿದೆ ಎಂದು ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಹೇಳಿದ್ದಾರೆ.
ಉತ್ತರ ಕರ್ನಾಟಕದ ಸಂಸದರಿಗೆ ಬಹು ವರ್ಷಗಳ ನಿರೀಕ್ಷೆಯಾಗಿದ್ದ ಸಚಿವ ಸ್ಥಾನವನ್ನು ಬೆಳಗಾವಿಯ  ಸುರೇಶ ಅಂಗಡಿ ಹಾಗೂ ಹುಬ್ಬಳ್ಳಿಯ  ಪ್ರಲ್ಹಾದ ಜೋಷಿ ಅವರಿಗೆ ನೀಡಿರುವುದು ಉತ್ತರ ಕರ್ನಾಟಕದ ಸಮಸ್ತ ಜನತೆಗೆ ಹರ್ಷ ಉಂಟಾಗಿದೆ. ಇವರ ಜೊತೆ ಸದಾನಂದ ಗೌಡ ಅವರಿಗೂ ಮೋದಿ ಸಂಪುಟದಲ್ಲಿ ಸ್ಥಾನ ದೊರಕಿರುವುದು ಸ್ವಾಗತಾರ್ಹವೆನಿಸಿದೆ. ಮೂವರು ಸಚಿವರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅಂತೆಯೇ ಸಂಪುಟದಲ್ಲಿ ಸ್ಥಾನ ಕಲ್ಪಿಸಿದ  ಮೋದಿ ಅವರಿಗೂ ನಾಡಿನ ಸಮಸ್ತ ಜನತೆಯ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಡಾ.ಪ್ರಭಾಕರ ಕೋರೆ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button