Kannada NewsKarnataka NewsLatestPolitics

*ಬಸ್ ಪ್ರಯಾಣ ದರ ಏರಿಕೆಗೆ ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದೇನು?*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ದುಬಾರಿ ದುನಿಯಾ ಶುರುವಾಗಿದ್ದು, ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನರಿಗೆ ಇಂದು ಸಾರಿಗೆ ಬಸ್‌ಗಳ ಪ್ರಯಾಣ ದರ ಏರಿಕೆ ಮಾಡುವ ಮೂಲಕ ರಾಜ್ಯ ಸರ್ಕಾರ ಮತ್ತೊಂದು ಬರೆ ಎಳೆದಿದೆ.

ಬಸ್ ದರ ಏರಿಕೆ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್​​ ಬಸ್ ದರ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಬಸ್ ಗಳಿಗೆ ಡೀಸೆಲ್​ ಹಾಕಲೂ ಹಣ ಇರಲಿಲ್ಲ, ತುಂಬಾ ನಷ್ಟ ಆಗಿತ್ತು. ಒಂದೊಂದು ಸ್ಟೇಜ್‌ನಲ್ಲಿ ಎರಡ್ಮೂರು ರೂಪಾಯಿ ಹೆಚ್ಚಿಸಿರಬೇಕು. ಈಗ ಮಾತಾಡುವವರು ಗ್ಯಾಸ್ ಸಿಲಿಂಡರ್​ ಬೆಲೆ ಹೆಚ್ಚಾದಾಗ ಯಾಕೆ ಮಾತನಾಡಲಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಸಿಲಿಂದರ್ ದರ, ಡೀಸೆಲ್ ದರ ಹೆಚ್ಚಾದಾಗ ಯಾಕೆ‌ ಯಾರೂ ಕೇಳಿಲ್ಲ? ಡೀಸೆಲ್​ ದರ ಕಡಿಮೆ‌ ಮಾಡಿಸಿ, ನಾವು ಕಡಿಮೆ‌ ಮಾಡಿಸೋಣ. ಕೇಂದ್ರ ಸರ್ಕಾಅರದ ಬಳಿ ಡೀಸೆಲ್ ದರ ಕಡಿಮೆ ಮಾಡಿಸಲು ಹೇಳಿ. ಆಗ ನಾವೂ ದರ ಕಡಿಮೆ ಮಾಡುತ್ತೇವೆ ಎಂದು ಹೇಳಿದ್ದಾರೆ.


Related Articles

Back to top button