Latest

ನೀವು ಮಾಡಹೊರಟಿರುವುದು ದೇಶದ ಸಂವಿಧಾನ ವಿರೋಧಿ ಕೆಲಸ : ಪೊಲೀಸ್ ಶಿಸ್ತು ನಡವಳಿಕೆ ತಿದ್ದುಪಡಿಗೆ ಕಾನ್ಸ್ಟೆಬಲ್ ಆಕ್ಷೇಪ; ಭಾರೀ ವೈರಲ್ ಆಯ್ತು ಪತ್ರ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಕರ್ನಾಟಕ ಪೊಲೀಸ್ ಶಿಸ್ತು ನಡವಳಿಕೆ ನಿಯಮಗಳಿಗೆ ತಿದ್ದುಪಡಿ ತರಲು ರಾಜ್ಯ ಸರಕಾರ ಮುಂದಾಗಿರುವ ಹಿನ್ನೆಲೆಯಲ್ಲಿ ಶಿವಮೊಗ್ಗದ ಪೊಲೀಸರೊಬ್ಬರು ಆಕ್ಷೇಪಣೆ ಸಲ್ಲಿಸಿದ್ದು, ನೀವು ಮಾಡಹೊರಟಿರುವುದು ದೇಶದ ಸಂವಿಧಾನ ವಿರೋಧಿ ಕೆಲಸ ಎಂದು ಎಚ್ಚರಿಸಿದ್ದಾರೆ.

ಪೊಲೀಸರಿಗೆ ಮೇಲ್ಮನವಿ ಸಲ್ಲಿಸುವ ಅವಕಾಶ ನಿರಾಕರಿಸುವ ತಿದ್ದುಪಡಿಗೆ ಕಾನ್ಸ್ಟೆಬಲ್ ರಾಮಪ್ಪ ಎಚ್.ಎಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಇದು ಸಂವಾಧನ ನೀಡಿರುವ ಮೂಲಭೂತ ಹಕ್ಕಾಗಿದ್ದು, ಇದಕ್ಕೆ ತಿದ್ದುಪಡಿ ತರುವುದು ಸಂವಿಧಾನ ವಿರೋಧಿ ಕೆಲಸವಾಗಿದೆ ಎಂದಿದ್ದಾರೆ.

ಸಂವಿಧಾನ ನೀಡಿರುವ ಹಕ್ಕನ್ನು ಕಸಿಯುವುದು ದೊಡ್ಡ ಅಪರಾಧವಾಗಿದೆ. ಅಲ್ಲದೆ ಕರಡು ಪ್ರತಿಯನ್ನು ಕೇವಲ ಇಂಗ್ಲೀಶ್ ನಲ್ಲಿ ಪ್ರಕಟಿಸಿರುವುದು ತ್ರಿಭಾಷಾ ಸೂತ್ರದ ಸ್ಪ,್ಟ ಉಲ್ಲಂಘನೆಯಾಗಿದೆ. ಪೊಲೀಸ್ ಇಲಾಖೆಯಲ್ಲಿ ಶೇ.90ರಷ್ಟು ಸಿಬ್ಬಂದಿಗೆ ಇಂಗ್ಲೀಷ್ ಅರ್ಥವಾಗುವುದಿಲ್ಲ. ಹಾಗಾಗಿ ಕರಡುಪ್ರತಿಯನ್ನು ಕನ್ನಡದಲ್ಲಿ ಮುದ್ರಿಸಿ ಎಂದೂ ಅವರು ಕೋರಿದ್ದಾರೆ.

ಈ ಆಕ್ಷೇಪಣೆ ಈಗ ಭಾರಿ ವೈರಲ್ ಆಗಿದೆ.

ಆಕ್ಷೇಪಣೆಯ ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ – Govt Appeal KSP DP rull

ಬಿಜೆಪಿಯಲ್ಲಿ ದೊಡ್ಡ ಸಂಚಲನ : ಈಶ್ವರಪ್ಪ ವಿರುದ್ಧ ಶಿಸ್ತು ಕ್ರಮ ಸಾಧ್ಯತೆ

https://pragati.taskdun.com/politics/big-movement-in-bjp-disciplinary-action-against-eshwarappa-is-possible/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button