Latest

ಐಪಿಎಲ್ ಟ್ರೋಫಿ ಗೆಲ್ಲುವ ತಂಡದ ಬಹುಮಾನದ ಮೊತ್ತ ವಲ್ಡ್ ಕಪ್ ಗಿಂತ ಹೆಚ್ಚು !

ಪ್ರಗತಿ ವಾಹಿನಿ ಸುದ್ದಿ, ಮುಂಬೈ –  ಐಪಿಎಲ್ ಟಿ 20 ಪಂದ್ಯಾವಳಿಯ ವಿಜೇತ ತಂಡಕ್ಕೆ ನೀಡುವ ಬಹುಮಾನದ ಮೊತ್ತ  ವಿಶ್ವದಲ್ಲಿ ಇನ್ಯಾವುದೇ ಟಿ 20 ಪಂದ್ಯಾವಳಿಯಲ್ಲಿ ನೀಡುವ ಬಹುಮಾನಕ್ಕಿಂತ ಹೆಚ್ಚಾಗಿದೆ.
ವಿವಿಧ ಪ್ರಸಿದ್ಧ ಟಿ 20 ಪಂದ್ಯಾವಳಿಗಳ ಬಹುಮಾನದ ಹಣವನ್ನು ಕ್ರಿಕ್ ಟ್ರ್ಯಾಕರ್ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು ಅದರ ಪ್ರಕಾರ ಐಪಿಎಲ್ ವಿಜೇತ ತಂಡಕ್ಕೆ ನೀಡುವ  ಬಹುಮಾನ 20 ಕೋಟಿ ರೂ. ಆಗಿದೆ. ಇದು ಟಿ 20 ವಿಶ್ವಕಪ್ ಗೆಲ್ಲುವ ತಂಡಕ್ಕೆ ನೀಡುವ ಬಹುಮಾನಕ್ಕಿಂತ ಹೆಚ್ಚಾಗಿದೆ.ಟಿ 20 ವಿಶ್ವ ಕಪ್ ಗೆಲ್ಲುವ ತಂಡಕ್ಕೆ 13.02 ಕೋಟಿ ರೂ. ಬಹುಮಾನ ನೀಡಲಾಗುತ್ತದೆ.
  ಉಳಿದಂತೆ ಕೆರಿಬಿಯನ್ ಪ್ರೀಮಿಯರ್ ಲೀಗ್ ( ಸಿಪಿಎಲ್ ) ಗೆಲ್ಲುವ ತಂಡಕ್ಕೆ 8.14 ಕೋಟಿ, ಬಿಪಿಎಲ್ ನಲ್ಲಿ 6.92 ಕೋಟಿ, ಬಿಬಿಎಲ್ ನಲ್ಲಿ 3.66 ಕೋಟಿ, ಪಿಎಸ್ ಎಲ್ ನಲ್ಲಿ 3.40 ಕೋಟಿ, ಹಂಡ್ರೆಡ್ ಎಂಬ ಟಿ 20 ಪಂದ್ಯಾವಳಿ ಗೆಲ್ಲುವ ತಂಡಕ್ಕೆ 1.30 ಕೋಟಿ ರೂ. ಬಹುಮಾನ ನೀಡಲಾಗುತ್ತದೆ.

 

https://pragati.taskdun.com/latest/the-government-has-announced-the-frp-rate-of-sugarcane-per-factory-this-year/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button