Kannada NewsLatest

ಅಪ್ರಾಪ್ತ ಬಾಲಕಿಯ ಅಪಹರಣ; ಆರೋಪಿ ಬಂಧನ

ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಖಾಸಗಿ ಶಾಲೆಯೊಂದರ ವಿದ್ಯಾರ್ಥಿನಿ, 14 ವರ್ಷದ ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.

ಪೊಲೀಸರು ಆರೋಪಿಯನ್ನು ಬಂಧಿಸಿ ಬಾಲಕಿಯನ್ನು ರಕ್ಷಿಸಿದ್ದಾರೆ. ಕೆ. ಎಚ್. ಕಂಗ್ರಾಳಿಯ ಆಕಾಶ ದೋಡಿಯಾ (19) ಬಂಧಿತ ಆರೋಪಿ.

Home add -Advt

ಬಾಲಕಿಯನ್ನು ಗುಜರಾತದ ಅಹಮದಾಬಾದ್‍ನಲ್ಲಿರುವ ತನ್ನ ಸಂಬಂಧಿಯೊಬ್ಬರ ಮನೆಗೆ ಕರೆದೊಯ್ದಿದ್ದ ಆರೋಪಿ, ಅಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ್ದ.

ಬಾಲಕಿಯ ತಂದೆ ಕ್ಯಾಂಪ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರಿಗೆ ಬಾಲಕಿ ಹಾಗೂ ಆರೋಪಿ ಅಹಮದಾಬಾದ್‍ನಲ್ಲಿ ಇರುವುದು ತಿಳಿದುಬಂದಿದೆ. ಅಹಮದಾಬಾದ್‍ನಿಂದ ಬಾಲಕಿಯನ್ನು ರಕ್ಷಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಯ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ವೃದ್ಧೆಯನ್ನು ಕೊಲೆಗೈದು ಕಬೋರ್ಡ್ ನಲ್ಲಿ ಶವವಿಟ್ಟು ಎಸ್ಕೇಪ್ ಆದ ಮಹಿಳೆ

https://pragati.taskdun.com/80-years-old-womanmurderbangaloreanekalattibele/

Related Articles

Back to top button