Latest

*10 ದಿನದಲ್ಲಿ 3 ವಿದ್ಯಾರ್ಥಿನಿಯರ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ; ಲಖನೌ: ಕೇವಲ 10 ದಿನಗಳಲ್ಲಿ ಮೂವರು ವಿದ್ಯಾರ್ಥಿನಿಯರು ಆತ್ಮಹಯೆಗೆ ಶರಣಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮೂರು ಪ್ರಕರಣಕ್ಕೂ ಪ್ರೇಮ ಪ್ರಕರಣವೇ ಕಾರಣ ಎಂಬುದು ತನಿಖೆಯಿಂದ ಬಯಲಾಗಿದೆ.

ಪ್ರೀತಿಯ ವ್ಯಾಮೋಹದ ಬಲೆಗೆ ಸಿಲುಕಿದ್ದ ಮೂವರು ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಂಡಿದ್ದು, ಇನ್ನೋರ್ವ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಸೀತಾಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Home add -Advt

ಒಂದೇ ಶಾಲೆಯಲ್ಲಿ 11 ಹಾಗೂ 12ನೇ ತರಗತಿಯಲ್ಲಿ ಓದುತ್ತಿದ್ದ ಮೂವರು ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡಿಸೆಂಬರ್ 10ರಿಂದ 18ರವರೆಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೂವರ ಸಾವಿಗೆ ಪ್ರೇಮ ಪ್ರಕರಣವೇ ಕಾರಣ ಎಂದು ತನಿಖೆಯಿಂದ ತಿಳಿದುಬಂದಿದೆ.

ಈ ಪ್ರಕರಣದಲ್ಲಿ ಯಾವುದೇ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗಿಯಾಗಿಲ್ಲ. ಡಿಸೆಂಬರ್ 10ರಂದು ನಡೆದ ಮೊದಲ ಪ್ರಕರಣದಲ್ಲಿ ಯುವತಿ ತನ್ನ ನೆರಮನೆಯವನಾದ ರಾಹುಲ್ ಯಾದವ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಳು. ಇಬ್ಬರ ಸಂಬಂಧವನ್ನು ಯುವತಿ ಮನೆಯಲ್ಲಿ ಒಪ್ಪಿಲ್ಲ. ಹೀಗಾಗಿ ಬೇಸರಗೊಂಡು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ರಾಹುಲ್ ಯಾದವ್ ನನ್ನು ಬಂಧಿಸಲಾಗಿದೆ.

ಎರಡನೇ ಪ್ರಕರಣದಲ್ಲಿ ಯುವತಿ ಅಂಕಿತ್ ಪಾಸ್ವಾನ್ ಎಂಬಾತನನ್ನು ಪ್ರೀತಿಸಿದ್ದಳು. ಯುವತಿ ಮನೆಯವರೂ ಸಂಬಂಧವನ್ನು ಒಪ್ಪಿ ಆತನೊಂದಿಗೆ ಮದುವೆ ನಿಶ್ಚಯ ಮಾಡಿದ್ದರು. ಆದರೆ ಅಂಕಿತ್ ತಾಯಿ ವರದಕ್ಷಿಣೆಯಾಗಿ ಬೈಕ್ ಕೊಡುವಂತೆ ಕೇಳಿದ್ದರು. ಇದರಿಂದ ನೊಂದು ಯುವತಿ ಇಲಿ ಪಾಷಾಣ ಸೇವಿಸಿ ಸಾವನ್ನಪ್ಪಿದ್ದಾಳೆ.

ಮೂರನೇ ಪ್ರಕರಣದಲ್ಲಿ ಪ್ರೇಮ ಪ್ರಕರಣದಲಿ ನೊಂದ ಯುವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇನ್ನು ನಾಲ್ಕನೇ ಪ್ರಕರನದಲ್ಲಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸ್ನೇಹಿತರು ಮಾಡಿದ ಕಮೆಂಟ್ ನ್ನು ನೋಡಿ ನೊಂದು ತನ್ನ ಮಣಿಕಟ್ಟನ್ನು ಸೀಳಿಕೊಂಡಿದ್ದು, ಆಕೆಯನ್ನು ರಕ್ಷಿಸಲಾಗಿದೆ. ಯುವತಿಗೆ ಕೌನ್ಸೆಲಿಂಗ್ ಮಾಡಲಾಗಿದ್ದು, ಪ್ರಸ್ತುತ ಯುವತಿ ಆರೋಗ್ಯವಾಗಿದ್ದಾಳೆ ಎಂದು ಸೀತಾಪುರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

*ಹೆತ್ತ ಮಗಳಿಗೆ ದೇವದಾಸಿ ಪಟ್ಟ ಕಟ್ಟಿದ ಕುಟುಂಬ*

https://pragati.taskdun.com/21-yers-girldevadasicase-file-againest-4-familykoppala/

Related Articles

Back to top button