Latest

ನಾಯಿಗೆ ಹೆದರಿ 3ನೇ ಮಹಡಿಯಿಂದ ಜಿಗಿದು ಫುಡ್ ಡೆಲಿವರಿ ಬಾಯ್ ಸಾವು

 ಪ್ರಗತಿವಾಹಿನಿ ಸುದ್ದಿ, ಹೈದರಾಬಾದ್: ನಾಯಿಗೆ ಹೆದರಿದ ಸ್ವಿಗ್ಗಿ ಡೆಲಿವರಿ ಬಾಯ್ ಒಬ್ಬರು ಕಟ್ಟಡವೊಂದರ 3ನೇ ಮಹಡಿಯಿಂದ ಜಿಗಿದು ಮೃತಪಟ್ಟಿದ್ದಾರೆ.

ಮುಹಮ್ಮದ್ ರಿಝ್ವಾನ್ (23) ಮೃತಪಟ್ಟವರು. ಮೂರು ವರ್ಷಗಳಿಂದ ಅವರು ಸ್ವಿಗ್ಗಿಯಲ್ಲಿ ಕೆಲಸ ಮಾಡುತ್ತಿದ್ದರು.  ಬಂಜಾರಾ ಹಿಲ್ಸ್ ನಲ್ಲಿರುವ ಲುಂಬಿಣಿ ರಾಕ್ ಕ್ಯಾಸಲ್ ಅಪಾರ್ಟ್ಮೆಂಟ್ ನ ಮೂರನೇ ಮಹಡಿಯಲ್ಲಿರುವ ಶೋಭನಾ ಎಂಬುವವರ ಫ್ಲ್ಯಾಟ್ ಗೆ ಅವರು ಫುಡ್ ಪಾರ್ಸೆಲ್ ತಲುಪಿಸಲು ಹೋಗಿದ್ದರು

ಈ ವೇಳೆ, ಶೋಭನಾ ಅವರು ಮನೆಯ ಬಾಗಿಲು ತೆರೆಯುತ್ತಿದ್ದಂತೇ ಅಲ್ಲೇ ಇದ್ದ  ಜರ್ಮನ್ ಶೆಫರ್ಡ್ ನಾಯಿ ಹಠಾತ್ತನೆ ರಿಝ್ವಾನ್ ಮೇಲೆ ದಾಳಿ ನಡೆಸಿತು. ನಾಯಿಯಿಂದ ತಪ್ಪಿಸಿಕೊಳ್ಳಲು ಹೋಗಿ ರಿಝ್ವಾನ್ ಮೂರನೇ ಮಹಡಿಯಿಂದ ಜಿಗಿದು ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ನಿಜಾಮ್ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ನಿಮ್ಸ್) ದಾಖಲಿಸಲಾಗಿತ್ತು.

ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಮೃತಪಟ್ಟಿದ್ದಾರೆ.
ರಿಝ್ವಾನ್ ಅವರ ಸಹೋದರ ಮುಹಮ್ಮದ್ ಖಾಜಾ ಅವರು ಬಂಜಾರ ಹಿಲ್ಸ್ ಪೊಲೀಸರಿಗೆ ದೂರು ನೀಡಿದ್ದು, ನಾಯಿ ಮಾಲೀಕರಾದ ಶೋಭನಾ ವಿರುದ್ಧ ಸೆಕ್ಷನ್ 336 ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

*24 ವರ್ಷದ ಯುವತಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದ ದುಷ್ಕರ್ಮಿ*

https://pragati.taskdun.com/24-yeras-girlmurderkodaguvirajapete/

*ಹೋರಿ ಬೆದರಿಸುವ ಸ್ಪರ್ಧೆ: ಹೋರಿ ತಿವಿದು ಇಬ್ಬರು ಯುವಕರ ದುರ್ಮರಣ*

https://pragati.taskdun.com/bull-raceshivamoggatwo-youth-death/

*ನಾ ನಾಯಕಿ ಸಮಾವೇಶಕ್ಕೆ ಸಿಎಂ ಬೊಮ್ಮಾಯಿ ವ್ಯಂಗ್ಯ*

https://pragati.taskdun.com/priyanka-gandhikarnataka-visitcm-basavaraj-bommaireaction/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button