ರಮೇಶ್ ಜಾರಕಿಹೊಳಿ, ಡಿ.ಕೆ.ಶಿವಕುಮಾರ, ಲಕ್ಷ್ಮೀ ಹೆಬ್ಬಾಳಕರ್ ಬಳಿ ಬಾಲಚಂದ್ರ ಜಾರಕಿಹೊಳಿ ಮನವಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ನಾನು ರಮೇಶ ಜಾರಕಿಹೊಳಿ, ಡಿ.ಕೆ.ಶಿವಕುಮಾರ, ಲಕ್ಷ್ಮೀ ಹೆಬ್ಬಾಳಕರ್ ಮೂರು ಜನರಲ್ಲಿ ನಾನು ವಿನಂತಿಸುತ್ತೇನೆ. ದಯಮಾಡಿ ಸಿಡಿ ಪ್ರಕರಣ ಇಟ್ಟುಕೊಂಡು ವಯಕ್ತಿಕ ಟೀಕೆ ಮಾಡುವುದು ಬೇಡ. 3 ತಿಂಗಳಲ್ಲಿ ಚುನಾವಣೆ ಇದೆ. ರಾಜಕೀಯವಾಗಿ ಎಲ್ಲರೂ ಹೋರಾಡೋಣ. ಮೂರೂ ದೊಡ್ಡ ದೊಡ್ಡ ಕುಟುಂಬಗಳು. ಅವುಗಳಿಗೆ ಡ್ಯಾಮೇಜ್ ಮಾಡುವುದು ಬೇಡ ಎಂದು ರಮೇಶ ಜಾರಕಿಹೊಳಿ ಸಹೋದರ, ಕೆಎಂಎಫ್ ಚೇರಮನ್ ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತು ರಮೇಶ ಜಾರಕಿಹೊಳಿ ಜೊತೆ ಮಾತನಾಡುವುದಾಗಿಯೂ ಅವರು ತಿಳಿಸಿದ್ದಾರೆ. ಸಿಡಿ ಪ್ರಕರಣವನ್ನು ಈಗ ಯಾರೂ ಬೆಳೆಸುವುದು ಬೇಡ. 3 ತಿಂಗಳಲ್ಲಿ ಚುನಾವಣೆ ಇದೆ. ಈಗ ನಾವು ಸಿಡಿ ಪ್ರಕರಣ ಇಟ್ಟುಕೊಂಡು ಈ ರೀತಿ ಮಾಡಿದರೆ ಮೂರೂ ಕುಟುಂಬಗಳಿಗೆ ಡ್ಯಾಮೇಜ್ ಆಗಲಿದೆ. ಮೂರೂ ದೊಡ್ಡ ದೊಡ್ಡ ಕುಟುಂಗಳಿವೆ. ಎಲ್ಲರೂ ದೊಡ್ಡ ಮಟ್ಟದಲ್ಲಿ ಬೆಳೆದಿದ್ದೀರಿ. ಇನ್ನೂ ಬೆಳೆಯಿರಿ. ಎಲ್ಲರೂ ರಾಜಕೀಯವಾಗಿ ಅನುಭವ ಇದ್ದವರು. ದಯಮಾಡಿ ಮುಂದುವರಿಸಬೇಡಿ. ರಾಜಕೀಯವಾಗಿ ಹೋರಾಟ ಮುಂದುವರಿಸೋಣ ಎಂದು ವಿನಂತಿಸಿದರು.
ಪಕ್ಷದ ವೇದಿಕೆಯಲ್ಲಿ ಕುಳಿತು ಚರ್ಚಿಸೋಣ. ವಯಕ್ತಿಕವಾಗಿ ಯಾರನ್ನೂ ಟೀಕೆ ಮಾಡುವುದು ಬೇಡ. ಚುನಾವಣೆಯಲ್ಲಿ ಸೋಲಿಸಲು ಪರಸ್ಪರ ಪ್ರಯತ್ನಿಸೋಣ. ನಮ್ಮನ್ನು ಸೋಲಿಸಲು ನೀವು ಪ್ರಯತ್ನಿಸಿ, ನಿಮ್ಮನ್ನು ಸೋಲಿಸಲು ನಾವು ಪ್ರಯತ್ನಿಸುತ್ತೇವೆ. ಆದರೆ ಸಾರ್ವಜನಿಕವಾಗಿ ಚರ್ಚಿಸುವುದನ್ನು ಮೂರೂ ಜನ ನಿಲ್ಲಿಸಬೇಕು ಎಂದು ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದರು.
ರಮೇಶ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸಿಲುಕಿಕೊಂಡಾಗ ಬಾಲಚಂದ್ರ ಜಾರಕಿಹೊಳಿ ಗಟ್ಟಿಯಾಗಿ ರಮೇಶ ಜೊತೆ ನಿಂತಿದ್ದರು. ಅವರು ಸಚಿವಸ್ಥಾನಕ್ಕೆ ರಾಜಿನಾಮೆ ನೀಡುವ ಅಗತ್ಯವಿಲ್ಲ ಎಂದೂ ಪ್ರತಿಪಾದಿಸಿದ್ದರು. ಸತ್ಯಾಂಶ ಹೊರಬರಲು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲಿ ಎಂದೂ ಆಗ್ರಹಿಸಿದ್ದರು. ಯಾರೂ ಬೆಂಬಲಕ್ಕೆ ಬರದಿದ್ದಾಗಲೂ ಬಾಲಚಂದ್ರ ಜಾರಕಿಹೊಳಿ ರಮೇಶ ಜೊತೆ ನಿಂತು ನೈತಿಕ ಸ್ಥೈರ್ಯ ತುಂಬಿದ್ದರು.
ರಮೇಶ ಜಾರಕಿಹೊಳಿ ಜೊತೆ ಇದ್ದೂ ನಾನೂ ಹೋರಾಟ ಮಾಡಿದ್ದೇನೆ. ಈಗ ರಾಜಕೀಯವಾಗಿ ಹೋರಾಟ ಮಾಡೋಣ. ರಮೇಶ ಜಾರಕಿಹೊಳಿಗೆ ಅನ್ಯಾಯವಾಗಿದೆ, ತೊಂದರೆಯಾಗಿದೆ. ಆದರೆ ಸಾರ್ವಜನಿಕವಾಗಿ ಚರ್ಚೆ ಬೇಡ. ಲಕ್ಷ್ಮೀ ಹೆಬ್ಬಾಳಕರ್ ಅವರಲ್ಲಿ, ಡಿ.ಕೆ.ಶಿವಕುಮಾರ ಅವರಲ್ಲಿ, ರಮೇಶ ಜಾರಕಿಹೊಳಿ ಅವರಲ್ಲಿ ನಾನು ವಿನಂತಿಸುತ್ತೇನೆ. ನಮ್ಮ ಮೂರೂ ಜನರದ್ದೂ ದೊಡ್ಡ ದೊಡ್ಡ ಕುಟುಂಬಗಳು. ದಯಮಾಡಿ ಇಲ್ಲಿಗೇ ನಿಲ್ಲಿಸೋಣ, ಪಕ್ಷದ ವೇದಿಕೆಯಲ್ಲಿ ಚರ್ಚಿಸೋಣ. ಈ ಕುರಿತು ರಮೇಶ ಜಾರಕಿಹೊಳಿ ಜೊತೆ ಮಾತನಾಡುತ್ತೇನೆ. ಆಗಲೇ ನಾನು ಸಿಬಿಐ ತನಿಖೆ ವಹಿಸುವಂತೆ ಹೇಳಿದ್ದೆ. ಆದರೆ ಯಾರೂ ಕೇಳಿರಲಿಲ್ಲ. ಈಗ ಅದನ್ನೆಲ್ಲ ಸಾರ್ವಜವಿಕವಾಗಿ ಚರ್ಚೆ ಮಾಡುವುದರಿಂದ ನಮ್ಮನ್ನೇ ನಾವು ಡ್ಯಾಮೇಜ್ ಮಾಡಿಕೊಳ್ಳುತ್ತೇವೆ. 2023ರ ಚುನಾವಣೆಯಲ್ಲಿ ಜನರ, ದೇವರ ಆಶಿರ್ವಾದದಿಂದ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಎಲ್ಲರೂ ಚುನಾವಣೆಯಲ್ಲಿ ಫೈಟ್ ಮಾಡೋಣ ಎಂದು ಬಾಲಚಂದ್ರ ವಿನಂತಿಸಿದರು.
ರಮೇಶ್ ಜಾರಕಿಹೊಳಿಗೆ ಖಡಕ್ ಎಚ್ಚರಿಕೆ ಕೊಟ್ಟ ಎಂಎಲ್ ಸಿ ಚನ್ನರಾಜ ಹಟ್ಟಿಹೊಳಿ
https://pragati.taskdun.com/mlc-channaraja-hattiholipressmeetreactionramesh-jarakiholi/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ