Latest

*ಪ್ರಹ್ಲಾದ್ ಜೋಶಿ ಮಹಾರಾಷ್ಟ್ರ ಪೇಶ್ವೆ ವಂಶದವರು, ಶೃಂಗೇರಿ ಮಠ ಧ್ವಂಸ ಮಾಡಿದ ಗುಂಪಿನವರು; ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಜೆಡಿಎಸ್ ಪಂಚರತ್ನ ಯಾತ್ರೆಗೆ ಜನಸ್ಪಂದನೆ ಕಂಡು ಬಿಜೆಪಿ ನಾಯಕರಿಗೆ ಭಯ ಹುಟ್ಟಿದೆ. ಅದೇ ಕಾರಣಕ್ಕೆ ಬಿಜೆಪಿ ನಾಯಕರು ನಮ್ಮ ಕುಟುಂಬದ ಬಗ್ಗೆ, ಪಕ್ಷದ ಬಗ್ಗೆ ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಪಂಚರತ್ನ ರಥಯಾತ್ರೆಗೆ ನವಗ್ರಹ ಯಾತ್ರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕಿಸಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಿಎಂ ಕುಮಾರಸ್ವಾಮಿ, ನಮ್ಮ ಕುಟುಂಬ, ಪಕ್ಷದ ಬಗ್ಗೆ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡುತ್ತಿದ್ದಾರೆ. ಇದಕ್ಕೆ ಕಾರಣ ಆರ್ ಎಸ್ ಎಸ್ ಅವರನ್ನು ಸಿಎಂ ಮಾಡಲು ಹೊರಟಿರುವುದು ಎಂದು ಹೇಳಿದ್ದಾರೆ.

Related Articles
Home add -Advt

ಪ್ರಹ್ಲಾದ್ ಜೋಶಿ ಅವರನ್ನು ಮುಂದಿನ ಮುಖ್ಯಮಂತ್ರಿ ಮಾಡಲು ಆರ್ ಎಸ್ ಎಸ್ ಹುನ್ನಾರ ನಡೆಸಿದೆ. ಪ್ರಹ್ಲಾದ್ ಜೋಶಿ ನಮ್ಮ ದಕ್ಷಿಣ ಕರ್ನಾಟಕ ಸಂಸ್ಕೃತಿಯ ಬ್ರಾಹ್ಮಣರಲ್ಲ, ಬ್ರಾಹ್ಮಣ ವೃತ್ತಿ ಸಂಸ್ಕಾರದಲ್ಲಿ 2-3ರೀತಿ ಇದೆ. ಜೋಶಿಯವರು ಶೃಂಗೇರಿ ಮಠವನ್ನು ಹೊಡೆದಿರುವ ಗುಪಿಗೆ ಸೇರಿದವರು.  ರಾಷ್ಟ್ರಪಿತ ಮಹಾತ್ಮಾ ಗಾಂಧಿ ಕೊಂದಿರುವವರ ವರ್ಗಕ್ಕೆ ಸೇರಿದವರು ಪ್ರಹ್ಲಾದ್ ಜೋಶಿ ಎಂದು ಆರೋಪಿಸಿದ್ದಾರೆ.

ಕೇಂದ್ರ ಸಚಿವ ಜೋಶಿ ನಮ್ಮ ಹಳೆ ಕರ್ನಾಟಕದ ಬ್ರಾಹ್ಮಣರಲ್ಲ. ಶೃಂಗೇರಿ ಮಠ ಧ್ವಂಸಮಾಡಿದ ದೇಶಸ್ಥ ಬ್ರಾಹ್ಮಣರ ಗುಂಪಿಗೆ ಸೇರಿದವರು. ಇವರು ಶಂಕರಾಚಾರ್ಯರನ್ನು ಹೊಡೆದು ಓಡಿಸಿದವರು. ಆದ್ದರಿಂದ ರಾಜ್ಯದ ಜನತೆ ಎಚ್ಚರಿಕೆಯಿಂದ ಇರಿ. ಹಳೇ ಕರ್ನಾಟಕದ ಬ್ರಾಹ್ಮಣರು ಸರ್ವೇಜನಾ: ಸುಖಿನೋ ಭವಂತು ಎಂದು ಹೇಳುತ್ತಾರೆ. ಆದರೆ ಇವರು ಹಾಗೆ ಹೇಳುವವರಲ್ಲ. ಪ್ರಹ್ಲಾದ್ ಜೋಶಿ ಮಹಾರಾಷ್ಟ್ರದ ಭಾಗದ ಪೇಶ್ವೆಗಳ ವಂಶಸ್ಥರಿಗೆ ಸೇರಿದವರು. ಪ್ರಹ್ಲಾದ್ ಜೋಶಿಯನ್ನು ಆರ್ ಎಸ್ ಎಸ್ ಸಿಎಂ ಮಾಡಲು ಚಿಂತನೆ ನಡೆಸಿದೆ. ಹಾಗಾಗಿ ಜೋಶಿ ನಮ್ಮ ಮೇಲೆ ಪ್ರಹಾರ ಮಾಡಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

*ಸಿಎಂ ಬೊಮ್ಮಾಯಿ ದಿಢೀರ್ ದೆಹಲಿಗೆ*

https://pragati.taskdun.com/cm-basavaraj-bommaidelhivisit/

Related Articles

Back to top button