Kannada NewsKarnataka NewsLatest

ಅಕ್ಕೋಳದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಯುವಜನರು ಸಕಾರಾತ್ಮಕ ಹಾಗೂ ಸಮಾಜಮುಖಿ ಚಿಂತನೆಗಳನ್ನು ಹೊಂದುವ ಮೂಲಕ ದೇಶದ ಶಕ್ತಿಯಾಗಿ ಮಾರ್ಪಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸಲಹೆ ನೀಡಿದರು.

Home add -Advt

ನಿಪ್ಪಾಣಿ ತಾಲೂಕಿನ ಅಕ್ಕೋಳ ಗ್ರಾಮದಲ್ಲಿ ಶ್ರೀ ಛತ್ರಪತಿ ಶಿವಾಜಿ ತರುಣ ಮಂಡಳ ಸಮುದಾಯ ಭವನ ನಿರ್ಮಾಣದ ಸಲುವಾಗಿ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ (MLC Fund) ಹಣ ಬಿಡುಗಡೆ ಮಾಡಿಸಿ, ಇಂದು ನಿರ್ಮಾಣ  ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಶ್ರೀ ಛತ್ರಪತಿ ಶಿವಾಜಿ ತರುಣ ಮಂಡಳದ ಯುವಕರು ಕ್ರಿಯಾಶೀಲರಾಗಿದ್ದು ಸಾಮಾಜಿಕ ಹಿತದ ಕಾರ್ಯಗಳಲ್ಲಿ ತೊಡಗಿರುವುದು ಮಾದರಿಯಾಗಿದೆ. ಯುಕ ಮಂಡಳದ ಸತ್ಕಾರ್ಯಗಳಿಗೆ ತಮ್ಮ ಬೆಂಬಲ ನಿರಂತರವಾಗಿರುತ್ತದೆ ಎಂದು ಚನ್ನರಾಜ ಹಟ್ಟಿಹೊಳಿ ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಪಂಕಜ ಪಾಟೀಲ, ರಾಜೇಶ ಕದಂ, ಧಾನಾಜಿ ಚೌಹಾನ್, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ,, ಸುಹಾಸ ಪಟದೆ, ಬಾಬಾಸಾಹೇಬ ಕಿಲ್ಲೇದಾರ, ಹೇಮಂತ ಬರ್ಮಾಳ, ರಾವಸಾಬ ವಸಾಳೆ ಹಾಗೂ ಮುಂತಾದವರು ಉಪಸ್ಥಿತರಿದ್ದರು.

*ಪ್ರಹ್ಲಾದ್ ಜೋಶಿ ಮಹಾರಾಷ್ಟ್ರ ಪೇಶ್ವೆ ವಂಶದವರು, ಶೃಂಗೇರಿ ಮಠ ಧ್ವಂಸ ಮಾಡಿದ ಗುಂಪಿನವರು; ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ*

https://pragati.taskdun.com/h-d-kumaraswamyprahlad-joshiattack/

ಬೆಟ್ಟಿಂಗ್ ಹಾಗೂ ಸಾಲ ನೀಡುವ ಆ್ಯಪ್ ಗಳಿಗೆ ಶೀಘ್ರವೇ ನಿಷೇಧ

https://pragati.taskdun.com/betting-and-lending-apps-will-soon-be-banned/

*ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ವಿಧಿವಶ*

https://pragati.taskdun.com/pakistans-former-presidentpervez-musharrafdeath/

Related Articles

Back to top button