Kannada NewsLatestUncategorized

*ರೈತರಿಗೆ ಬಂಪರ್ ಕೊಡುಗೆ: ಸಂಸದ ಈರಣ್ಣ ಕಡಾಡಿ ಹರ್ಷ*

ಪ್ರಗತಿವಹಿನಿ ಸುದ್ದಿ; ಮೂಡಲಗಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು 2023-2024ನೇ ಸಾಲಿನ ಬಜೆಟ್ ಮುಂದಿನ 25 ವರ್ಷಗಳ ದೂರದೃಷ್ಠಿ ಹೊಂದಿರುವ ಸಮಚಿತ್ತದ ಸಮತೊಲನದ ಬಜೆಟ್‌ನ್ನು ರೈತಾಪಿ ವರ್ಗಕ್ಕೆ ಶೂನ್ಯ ಬಡ್ಡಿದರದಲ್ಲಿ ರೂ 5 ಲಕ್ಷ ಸಾಲ ಸೌಲಭ್ಯ ನೀಡುವ ಮೂಲಕ ಕೃಷಿ, ನೀರಾವರಿ, ಆರೋಗ್ಯ, ಶಿಕ್ಷಣ, ಕೈಗಾರಿಕೆ, ಮಹಿಳೆಯರಿಗೆ, ಪ್ರವಾಸೋದ್ಯಮ ಹೀಗೆ ಎಲ್ಲ ಕ್ಷೇತ್ರಗಳಿಗೂ ಆದ್ಯತೆ ನೀಡಲಾಗಿದೆ ಎಂದು ರಾಜ್ಯಸಭಾ ಸದಸ್ಯರು ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಬಜೆಟ್ ಕುರಿತು ಹರ್ಷ ವಕ್ತಪಡಿಸಿದರು.

ಈ ವರ್ಷದ ಒಟ್ಟು ಬಜೆಟ್ ಗಾತ್ರ 3.9 ಲಕ್ಷ ಕೋಟಿ ರೂ, ಕೃಷಿ ಕ್ಷೇತ್ರಕ್ಕೆ 39,031 ಕೋಟಿ ಅನುದಾನ ನೀಡಲಾಗಿದೆ. ಕಿಸಾನ್ ಕ್ರೇಡಿಟ್ ಕಾರ್ಡ ಹೊಂದಿರುವ 50 ಲಕ್ಷ ರೈತರಿಗೆ ‘ಭೂ ಸಿರಿ’ ನೂತನ ಯೋಜನೆಯನ್ನು ಜಾರಿಗೆ ತಂದಿದ್ದು ಬಿತ್ತನೆ ಬೀಜ, ಗೋಬ್ಬರಕ್ಕೆ ಹೆಚ್ಚುವರಿಯಾಗಿ ರೂ 10 ಸಾವಿರ ಸಹಾಯಧನ ನೀಡಲಾಗುವುದು. ರಾಜ್ಯದ 56 ಲಕ್ಷ ಸಣ್ಣ ಮತ್ತು ಅತಿಸಣ್ಣ ರೈತ ಕುಟುಂಬಗಳಿಗೆ ಆರೋಗ್ಯ ಸೇವೆ ಒದಗಿಸಲು ಜೀವನ ಜ್ಯೋತಿ ಯೋಜನೆಗೆ ರೂ 181 ಕೋಟಿ ಅನುದಾನ ನೀಡಲಾಗಿದೆ. ರೈತ ವಿದ್ಯಾನಿಧಿ ಯೋಜನೆಯನ್ನು ಮೀನುಗಾರರು, ಟ್ಯಾಕ್ಸಿ ಆಟೋ ಚಾಲಕರ ಮಕ್ಕಳಿಗೂ ಯೋಜನೆಯನ್ನು ವಿಸ್ತರಣೆ ಮಾಡಲಾಗಿದೆ, ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಪ್ರತಿ ತಿಂಗಳು ತಲಾ ರೂ 5೦೦ ಸಹಾಯ ಧನವನ್ನು ಡಿ.ಬಿ.ಟಿ ಮೂಲಕ ನೀಡಲಿದೆ ಎಂದರು.

Home add -Advt

ಹಾಲು ಉತ್ಪಾದಕರಿಗೆ ರೂ1067 ಕೋಟಿ ರೂ ಅನುದಾನ, ಕೀರುಧಾನ್ಯ ಬೆಳೆಗಾರಿಗೆ ಪ್ರತಿ ಹೆಕ್ಟೆರ್ ಗೆ ರೂ 10 ಸಾವಿರ ಪ್ರೋತ್ಸಾಹ ಧನ, ಅಡಿಕೆ ಬೆಳೆ ರೋಗ ನಿರ್ವಹಣೆ,ತಂತ್ರಜ್ಞಾನ ಅಭಿವೃದ್ದಿಗೆ ರೂ 1೦ ಲಕ್ಷ ಕೋಟಿ ಅನುದಾನ ಘೋಷಣೆ, ದ್ರಾಕ್ಷೀ ಬೆಳೆಗಾರಿಗೆ 1೦೦ ಕೋಟಿ ರೂಗಳ ನೇರವು ಯೋಜನೆ ಆರಂಭಿಸಲಾಗುವುದು. ರೇಷ್ಮೆ ಬೆಳೆಯಲು 1೦ ಸಾವಿರ ಹೆಕ್ಟೇರ್ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುವುದು, ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ನೀರಾವರಿ ಯೋಜನೆಗಳಿಗೆ ರೂ 22854 ಕೋಟಿ ರೂ ಹೆಚ್ಚಿನ ಅನುದಾನ, ಕೃಷಿ ಮತ್ತು ಕೃಷಿ ಪೂರಕ ಚಟುವಟಿಕೆಗಳಿಗೆ ರೂ 49,031 ಕೋಟಿ ಮೀಸಲು ಹೀಗೆ ಹಲವಾರು ಯೋಜನೆಗಳಿಗೆ ಅನುದಾನ ನೀಡಿದ್ದಾರೆ.

ಕಿತ್ತೂರ ಭಾಗದ ಅಭಿವೃದ್ದಿಗೆ ಕಿತ್ತೂರ ಕರ್ನಾಟಕ ಮಂಡಳಿ ಸ್ಥಾಪನೆ, ಧಾರವಾಡ – ಬೆಳಗಾವಿ ನೂತನ ರೈಲು ಮಾರ್ಗ ತ್ವರಿತಗತಿಯಲ್ಲಿ ಸಾಗಲು ಭೂ ಸ್ವಾಧಿನಕ್ಕೆ ರೂ 15೦ ಕೋಟಿ ಅನುದಾನ, ಬೆಳಗಾವಿಯ ಕಣಗಲಾ ಗ್ರಾಮದಲ್ಲಿ ಕೈಗಾರಿಕಾ ಹಬ್ಬ ಸ್ಥಾಪನೆಗೆ ಕ್ರಮ, ಕಳಸಾ ಬಂಡೂರಿ ಯೋಜನೆಗೆ ರೂ 8೦ ಕೋಟಿ ಅನುದಾನ ನೀಡಿದ್ದಾರೆಂದರು. ಈ ಬಜೆಟ್‌ನ್ನು ಸಂಸದ ಈರಣ್ಣ ಕಡಾಡಿ ಶ್ಲಾಘೀಸಿದ್ದಾರೆ ಮತ್ತು ಸ್ವಾಗತಿಸಿದ್ದಾರೆ.

*ಬಜೆಟ್ ಭಾಷಣದ ಮೂಲಕ ಜನರ ಕಿವಿ ಮೇಲೆ ಚಂಡೂವ ಇಡುವ ಕೆಲಸ ಮಾಡಿದ್ದಾರೆ; ಸಿಎಂ ಬೊಮ್ಮಾಯಿ ಬಜೆಟ್ ಬಗ್ಗೆ ಡಿ.ಕೆ.ಶಿವಕುಮಾರ್ ಲೇವಡಿ*

https://pragati.taskdun.com/karnataka-budgetcm-basavaraj-bommaid-k-shivakumarreaction/

Related Articles

Back to top button