Latest

19 ವರ್ಷದ ಯುವತಿ ಮೇಲೆ ಒಂದು ವರ್ಷದಿಂದ ಅತ್ಯಾಚಾರ ನಡೆಸಿದ ಆನ್ ಲೈನ್ ಫ್ರೆಂಡ್

ಪ್ರಗತಿವಾಹಿನಿ ಸುದ್ದಿ, ಗುರುಗ್ರಾಮ: ಆನ್ ಲೈನ್ ನಲ್ಲಿ ಪರಿಚಯವಾಗಿದ್ದ ಯುವಕನೊಬ್ಬ ದೆಹಲಿ ಮೂಲದ 19 ವರ್ಷದ ವಿದ್ಯಾರ್ಥಿನಿ ಮೇಲೆ ಒಂದು ವರ್ಷದಿಂದ ನಿರಂತರ ಅತ್ಯಾಚಾರ ನಡೆಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

ತನ್ನ ಸ್ನೇಹಿತರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಆನ್ ಲೈನ್ ಮಿತ್ರ  ಬ್ಲ್ಯಾಕ್‌ಮೇಲ್ ಮಾಡಲು ಪ್ರಾರಂಭಿಸಿದ ನಂತರ ಸಂತ್ರಸ್ತೆ ದೂರು ದಾಖಲಿಸಿದ್ದಾರೆ. ಸೆಪ್ಟೆಂಬರ್ 2021 ರಲ್ಲಿ ತಾವಿಬ್ಬರೂ ಎಂಜಿಎಫ್ ಮಾಲ್‌ನಲ್ಲಿ ಭೇಟಿಯಾದ್ದು, ಅಲ್ಲಿಂದ ಆತ ನನ್ನನ್ನು ಡಿಎಲ್‌ಎಫ್ ಹಂತ -2 ಪ್ರದೇಶದ ಅತಿಥಿ ಗೃಹಕ್ಕೆ ಕರೆದೊಯ್ದು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾಗಿ ಯುವತಿ ತಿಳಿಸಿದ್ದಾಳೆ.

ಅಂದಿನಿಂದ, ಆರೋಪಿ ಪದೇಪದೆ ಆಕೆಗೆ ಕರೆ ಮಾಡಿ ತನ್ನೊಂದಿಗೆ ಲೈಂಗಿಕ ಕ್ರಿಯೆಗೆ ಒಪ್ಪಿಸುತ್ತಿದ್ದ. ಮಾನೇಸರ್‌ನ ಹೋಟೆಲ್‌ನಲ್ಲಿ ತನ್ನ ಮೇಲೆ ಹಲವಾರು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತ ಯುವತಿ ಆರೋಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ತನಗೆ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ ಆರೋಪಿ ಕಳೆದ ವರ್ಷ ಸೆಪ್ಟಂಬರ್ ನಲ್ಲಿ ಮತ್ತೊಮ್ಮೆ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಯುವತಿ ದೂರಿದ್ದಾಳೆ.

1 ಲಕ್ಷ ಜನ ಸರ್ಕಾರಿ ನೌಕರರ ಹುದ್ದೆ ಭರ್ತಿ; 7ನೇ ವೇತನ ಆಯೋಗದ ಮಧ್ಯಂತರ ವರದಿ ಜಾರಿ – ಸಿಎಂ

https://pragati.taskdun.com/1-lakh-government-employees-posts-filled-implementation-of-interim-report-of-7th-pay-commission-cm/

ಗೋಕಾಕ ಪಿಎಸ್ಐ ಹೃದಯಾಘಾತಕ್ಕೆ ಬಲಿ

https://pragati.taskdun.com/gokak-psi-succumbed-to-heart-attack/

ಮಹಿಳೆಯರಿಂದ ಈ ವಿಷಯದಲ್ಲಿ ಬದಲಾವಣೆ ಸಾಧ್ಯವಿದೆ – ಶಶಿಕಲಾ ಜೊಲ್ಲೆ

https://pragati.taskdun.com/women-can-make-a-change-in-this-matter-shashikala-jolle/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button