Latest

ಮೂವರು ಮಹನೀಯರಿಗೆ ರಾಜ್ಯ ಸರಕಾರದ ಪ್ರತಿಷ್ಠಿತ ಪಂಪ ಪ್ರಶಸ್ತಿ ಘೋಷಣೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಕನ್ನಡ ಸಾಹಿತ್ಯ ಲೋಕದ ಅನನ್ಯ ಸೇವೆ ಸಲ್ಲಿಸಿದವರಿಗೆ ರಾಜ್ಯ ಸರಕಾರ ನೀಡುವ ಪ್ರತಿಷ್ಠಿತ ಪಂಪ ಪ್ರಶಸ್ತಿ ಯನ್ನು ಈ ಬಾರಿ ಮೂವರು ಮಹನೀಯರಿಗೆ ಘೋಷಿಸಲಾಗಿದೆ.

2020-21ನೇ ಸಾಲಿಗೆ ಹಿರಿಯ ಸಾಹಿತಿ-ಸಾಹಿತ್ಯ ಸಂಶೋಧಕ ಮೈಸೂರಿನ ಪ್ರೊ.ಸಿ.ಪಿ.ಕೃಷ್ಣಕುಮಾರ, 2021-22ನೇ ಸಾಲಿಗೆ ಬರಹಗಾರ ಡಾ.ಬಾಬು ಕೃಷ್ಣಮೂರ್ತಿ, 2022-23ನೇ ಸಾಲಿಗೆ ಸಾಹಿತಿ ಹಾಗೂ ಪತ್ರಕರ್ತ ಡಾ.ಎಸ್.ಆರ್. ರಾಮಸ್ವಾಮಿ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

Home add -Advt

ಕೋವಿಡ್ ಸಾಂಕ್ರಾಮಿಕದ ಕಾರಣದಿಂದ ಎರಡು ವರ್ಷ ಪ್ರಶಸ್ತಿ ಘೋಷಿಸಿರಲಿಲ್ಲ. ಈಗ ಹಿಂದಿನ ಎರಡು ವರ್ಷಗಳ ಪ್ರಶಸ್ತಿಯೂ ಸೇರಿದಂತೆ  ಮೂರು ವರ್ಷಗಳ ಅವಧಿಯ ಪ್ರಶಸ್ತಿಗಳನ್ನು ಮೂವರಿಗೆ ಪ್ರದಾನ ಮಾಡಲಾಗುತ್ತಿದೆ.

3 ಲಕ್ಷ ನಗದು ಒಳಗೊಂಡ ಈ ಪ್ರಶಸ್ತಿ ರಾಜ್ಯ ಸರಕಾರ ನೀಡುವ ಪ್ರತಿಷ್ಠಿಯ ಪ್ರಶಸ್ತಿಗಳಲ್ಲಿ ಒಂದಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯ್ಕೆ ಸಮಿತಿ ಸಭೆಯಲ್ಲಿ ಇದನ್ನು ನಿರ್ಧರಿಸಿ ಪ್ರಕಟಿಸುತ್ತಿದೆ.

ಬನವಾಸಿಯಲ್ಲಿ ಇಂದು ಮತ್ತು ನಾಳೆ ನಡೆಯಲಿರುವ ರಾಜ್ಯಮಟ್ಟದ ಕದಂಬೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಕುವೆಂಪು, ಪುತಿನ, ಕೆ.ಎಸ್.ನರಸಿಂಹಸ್ವಾಮಿ, ಡಾ. ಶಿವರಾಮ ಕಾರಂತ, ಯಶವಂತ ಚಿತ್ತಾಲ, ಡಾ. ಪೂರ್ಣಚಂದ್ರ ತೇಜಸ್ವಿ, ಎಸ್.ಎಲ್‌.ಭೈರಪ್ಪ, ನಿಸಾರ್ ಅಹ್ಮದ್,  ಸೇರಿದಂತೆ 33 ಸಾಹಿತಿಗಳು ಈವರೆಗೆ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಡಬ್ಲ್ಯುಪಿಎಲ್‌ನಲ್ಲಿ ಗುಜರಾತ್ ಜೈಂಟ್ಸ್ ಮುನ್ನಡೆಸಲಿದ್ದಾರೆ ಆಸ್ಟ್ರೇಲಿಯಾದ ಬೆತ್ ಮೂನಿ

https://pragati.taskdun.com/australias-beth-mooney-will-lead-the-gujarat-giants-in-the-wpl/

*ನಾಳೆಯಿಂದಲೇ ಸರ್ಕಾರಿ ನೌಕರರ ಮುಷ್ಕರ; ಸಿಎಂ ಏನಂದ್ರು?*

https://pragati.taskdun.com/7th-pay-commissioninterim-reportcm-basavaraj-bommai/

ನಾಳೆಯಿಂದ ಸ್ಥಗಿತಗೊಳ್ಳಲಿವೆ ಸರಕಾರಿ ಸೇವೆಗಳು; ರಾಜ್ಯ ಸರಕಾರಿ ನೌಕರರ ಮುಷ್ಕರದ ಮಾರ್ಗಸೂಚಿ ಬಿಡುಗಡೆ

https://pragati.taskdun.com/government-services-to-be-suspended-from-tomorrow-release-of-guidelines-for-state-government-employees-strike/

Related Articles

Back to top button