ಪ್ರಗತಿವಾಹಿನಿ ಸುದ್ದಿ, ಬಾಗಲಕೋಟೆ: ದುರಾಸೆ, ದ್ವೇಷದ ಅತಿರೇಕಕ್ಕೆ ಇಬ್ಬರು ಸಹೋದರಿಯರು ನಡುರಸ್ತೆಯಲ್ಲೇ ಬರ್ಬರ ಹತ್ಯೆಗೀಡಾಗಿದ್ದಾರೆ.
ಜಿಲ್ಲೆಯ ರಬಕವಿ- ಬನಹಟ್ಟಿಯಲ್ಲಿ ಈ ಘಟನೆ ಸೋಮವಾರ ಸಂಜೆ ನಡೆದಿದೆ. ಯಲ್ಲವ್ವ ಭುಜಂಗ (40) ಹಾಗೂ ಬೌರವ್ವ ಭುಜಂಗ(37) ಹತ್ಯೆಗೀಡಾದ ಸಹೋದರಿಯರು.
ಸಂಬಂಧಿಗಳಲ್ಲಿ ಹಲವು ದಿನಗಳಿಂದ ಆಸ್ತಿಗೆ ಸಂಬಂಧಿಸಿದಂತೆ ವಿವಾದ ಮುಂದುವರಿದಿದ್ದು ಇದು ವಿಕೋಪಕ್ಕೆ ಹೋಗಿ ಸಂಜೆ ಕತ್ತಲು ಆವರಿಸುತ್ತಿದ್ದ ಸಮಯದಲ್ಲಿ ಇಬ್ಬರನ್ನೂ ಕೊಲೆಗೈಯ್ಯಲಾಗಿದೆ. ಸಂಬಂಧಿಗಳೇ ಈ ಕೃತ್ಯದಲ್ಲಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ