Latest

*ವೃಕ್ಷ ರಕ್ಷಣೆಗೆ‌ ಉಪನಯನ!*

ಪ್ರಗತಿವಾಹಿನಿ ಸುದ್ದಿ; ಶಿರಸಿ: ತಾಲೂಕಿನ ಎಕ್ಕಂಬಿ ಸೋಮ್ನಳ್ಳಿಯಲ್ಲಿ ವೃಕ್ಷ ರಕ್ಷಣೆಗೆ ಅಶ್ವತ್ಥ ಗಿಡದ ಬ್ರಹ್ಮೋಪದೇಶ ನೀಡುವ ಮೂಲಕ ವೃಕ್ಷ ಪ್ರೀತಿ ಮೆರೆದ ಪ್ರಸಂಗ ನಡೆಯಿತು.

ಇಲ್ಲಿನ ಗೊದ್ಲಮನೆಯ ಶ್ರೀಪಾದ ಜಿ. ಹೆಗಡೆ, ಗೀತಾ ಹೆಗಡೆ ದಂಪತಿಗಳು ನಾಲ್ಕು ವರ್ಷಗಳ ಹಿಂದೆ ನೆಟ್ಟು ಬೆಳೆಸಿದ ಅಶ್ವತ್ಥ ಗಿಡದ ಸುತ್ತ ಕಟ್ಟೆ ಕಟ್ಟಿಸಿ ರಕ್ಷಣೆಯನ್ನು ಮಾಡಿದರು. ಸಾವಿರಕ್ಕೂ‌ ಮಿಕ್ಕಿ ಎಲೆಗಳಿಂದ ಕಂಗೊಳಿಸುವ ಗಿಡಕ್ಕೆ ಶಾಸ್ತ್ರೋಕ್ತವಾಗಿ ಸೋಮವಾರ ದೊಡ್ಮನೆಯ ವಿ‌. ವಿಶ್ವನಾಥ ಭಟ್ಟ ಹಾಗೂ ಗಾಳಿಮನೆ ವಿ.ಚಂದ್ರಶೇಖರ ಭಟ್ ಅವರ ಮಾರ್ಗದರ್ಶನದಲ್ಲಿ ಅಶ್ವತ್ಥ ಉಪನಯನ ನಡೆಸಲಾಯಿತು.

Home add -Advt

ಇದೇ ವೇಳೆ ಲೋಕ ಕಲ್ಯಾಣಾರ್ಥವಾಗಿ ನಾಗರ ಹಾಗೂ ಭೂತೇಶ್ವರ ದೇವರ ಪ್ರತಿಷ್ಠೆ ನಡೆಸಲಾಯಿತು.

Related Articles

Back to top button