ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನ ಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಶನಿವಾರ ಬೆಂಗಳೂರಿನಲ್ಲಿ ಭಾರತೀಯ ಜನತಾ ಪಾರ್ಟಿಯ ಕೋರ್ ಕಮಿಟಿ ಸಭೆ ನಡೆಯಲಿದೆ.
ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳ ಕುರಿತೂ ಶನಿವಾರ ಚರ್ಚೆ ನಡೆಯಲಿದೆ. ಜಿಲ್ಲೆಯ ಪ್ರಮುಖರನ್ನೂ ಸಭೆಗೆ ಆಹ್ವಾನಿಸಲಾಗಿದೆ. ಇದಕ್ಕೆ ಪೂರ್ವಭಾವಿಯಾಗಿ ಶುಕ್ರವಾರ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಬೆಳಗಾವಿಗೆ ಆಗಮಿಸಿ ಪ್ರಮುಖರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಇದನ್ನೇ ಆಧಾರವಾಗಿಟ್ಟುಕೊಂಡು ಎರಡನೇ ಸುತ್ತಿನ ಚರ್ಚಿ ನಡೆಯಲಿದೆ. ಏಪ್ರಿಲ್ 8-10ರ ಹೊತ್ತಿಗೆ ಅಭ್ಯರ್ಥಿಗಳ ಪಟ್ಟಿ ಘೋಷಣೆಯಾಗಬಹುದು.
ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ:
- ಅಥಣಿ: ಮಹೇಶ ಕುಮಟಳ್ಳಿ
- ಕಾಗವಾಡ: ಶ್ರೀಮಂತ ಪಾಟೀಲ
- ಚಿಕ್ಕೋಡಿ : ಮಹಾಂತೇಶ ಕವಟಗಿಮಠ
- ನಿಪ್ಪಾಣಿ: ಶಶಿಕಲಾ ಜೊಲ್ಲೆ
- ಹುಕ್ಕೇರಿ: ನಿಖಿಲ್ ಕತ್ತಿ
- ಯಮಕನಮರಡಿ: ಮಾರುತಿ ಅಷ್ಟಗಿ
- ರಾಯಬಾಗ: ದುರ್ಯೋಧನ ಐಹೊಳೆ
- ಕುಡಚಿ: ಪಿ.ರಾಜೀವ
- ರಾಮದುರ್ಗ: ಮಹಾದೇವಪ್ಪ ಯಾದವಾಡ
- ಗೋಕಾಕ: ರಮೇಶ ಜಾರಕಿಹೊಳಿ
- ಅರಬಾವಿ: ಬಾಲಚಂದ್ರ ಜಾರಕಿಹೊಳಿ
- ಕಿತ್ತೂರು: ಮಹಾಂತೇಶ ದೊಡಗೌಡರ್
- ಸವದತ್ತಿ: ವಿರೂಪಾಕ್ಷಿ ಮಾಮನಿ
- ಬೈಲಹೊಂಗಲ: ಜಗದೀಶ್ ಮೆಟಗುಡ್/ ವಿಶ್ವನಾಥ ಪಾಟೀಲ
- ಖಾನಾಪುರ: ವಿಠ್ಠಲ ಹಲಗೇಕರ್/ ಅರವಿಂದ ಪಾಟೀಲ/ ಡಾ.ಸೋನಾಲಿ ಸರ್ನೋಬತ್
- ಬೆಳಗಾವಿ ಉತ್ತರ: ಅನಿಲ ಬೆನಕೆ
- ಬೆಳಗಾವಿದಕ್ಷಿಣ: ಅಭಯ ಪಾಟೀಲ
- ಬೆಳಗಾವಿ ಗ್ರಾಮೀಣ: ನಾಗೇಶ ಮನ್ನೋಳಕರ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ