LatestUncategorized

*ಕಾಂಗ್ರೆಸ್ ನವರು ಈವರೆಗೆ ನನ್ನನ್ನು 91 ಬಾರಿ ಬೈದಿದ್ದಾರೆ; ನಿಂದಿಸುವದರಲ್ಲೇ ಅವರು ಕಾಲ ಕಳೆಯುತ್ತಿದ್ದಾರೆ ಎಂದ ಪ್ರಧಾನಿ ಮೋದಿ*

ಪ್ರಗತಿವಾಹಿನಿ ಸುದ್ದಿ; ಬೀದರ್: ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ನಾಯಕರು ಬೈಯ್ಯುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ನಿಂದಿಸುವುದೇ ಕಾಂಗ್ರೆಸ್ ನಾಯಕರ ಚಾಳಿ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಬೀದರ್ ಜಿಲ್ಲೆಯ ಹುಮ್ನಾಬಾದ್ ನಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಈವರೆಗೆ ಕಾಂಗ್ರೆಸ್ ನವರು 91 ಬಾರಿ ನನ್ನನ್ನು ಬೈದಿದ್ದಾರೆ. ನನಗೆ ಬೈಯ್ಯುವುದರಲ್ಲಿಯೇ ಅವರು ಸಮಯ ವ್ಯರ್ಥ ಮಾಡುತ್ತಿದ್ದಾರೆ. ಒಳ್ಳೆಯ ಕೆಲಸವನ್ನು ಮಾಡುವವರನ್ನು ನಿಂದಿಸುವುದೇ ಕಾಂಗ್ರೆಸ್ ನವರ ಚಾಳಿ ಎಂದು ಟೀಕಿಸಿದರು.

Home add -Advt

ಮೊದಲು ನನ್ನನ್ನು ಚೌಕಿದಾರ್ ಚೋರ್ ಎಂದರು. ಈಗ ವಿಷದ ಹಾವಿಗೆ ಹೋಲಿಸುತ್ತಿದ್ದಾರೆ. ನನ್ನನ್ನು ನಿಂದಿಸಿದಾಗಲೆಲ್ಲ ಅವರಿಗೆ ಶಿಕ್ಷೆಯಾಗಿದೆ. ಡಾ. ಅಂಬೇಡ್ಕರ್ ಅವರನ್ನು ಕೂಡ ಕಾಂಗ್ರೆಸ್ ನವರು ನಿಂದಿಸಿದರು. ಬಾಬಾ ಸಾಹೇಬ್ ಅವರನ್ನು ರಾಕ್ಷಸ, ರಾಷ್ಟ್ರದ್ರೋಹಿ ಎಂದಿದ್ದರು. ಅವರಂತ ಮಹಾನ್ ವ್ಯಕ್ತಿಯನ್ನೂ ಕಾಂಗ್ರೆಸ್ ನವರು ನಿಂದಿಸಿದ್ದಾರೆ. ವೀರ ಸಾವರ್ಕರ್ ಅವರನ್ನೂ ನಿಂದಿಸಿದ್ದಾರೆ. ಮಹಾನ್ ಪುರುಷರನ್ನು ಅವಮಾನಿಸುವುದು ಕಾಂಗ್ರೆಸ್ ನವರ ಕೆಲಸ. ಅವರು ನಿಂದಿಸುತ್ತಾ ಇರಲಿ. ನಾನು ಜನತಾ ಜನಾರ್ಧನ ಸೇವೆಯಲ್ಲಿ ನಿರತನಾಗಿರುತ್ತೇನೆ. ಜನರ ಆಶಿರ್ವಾದದಿಂದ ಹಗಲು-ರಾತ್ರಿ ನಾನು ಕೆಲಸ ಮಾಡಲು ಸಾಧ್ಯವಾಗಿದೆ. ನಿಮ್ಮ ಆಶಿರ್ವಾದದಿಂದಲೆ ಕರ್ನಾಟಕದ ಸೇವೆ ಮಾಡಲು ನನಗೆ ಅವಕಾಶ ಸಿಕ್ಕಿದೆ. ಈ ಬಾರಿ ಚುನಾವಣೆಯಲ್ಲಿ ಪೂರ್ಣ ಬಹುಮತದಿಂದ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಹೇಳಿದರು.

https://pragati.taskdun.com/siddaramaiahcollapsevijayanagarakudlagi/


Related Articles

Back to top button