Kannada News
ಬೆಳಗಾವಿಯಲ್ಲಿ ಸಂಜೆ 5ಗಂಟೆಯವರೆಗೆ ಶೇ.66.37ರಷ್ಟು ಮತದಾನ


ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಸಂಜೆ 5ಗಂಟೆಯವರೆಗೆ ರಾಜಧಾನಿ ಬೆಂಗಳೂರಿನಲ್ಲಿ ಶೇ.50.91ರಷ್ಟು ಮತದಾನವಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಶೇ.66.37ರಷ್ಟು ಮತದಾನವಾಗಿದೆ. ರಾಮನಗರದಲ್ಲಿ ಶೇ.78.28ರಷ್ಟು ಮತದಾನವಾಗಿದೆ. ಬೆಂಗಳೂರು ಕೇಂದ್ರ ಶೆ.51.20ರಷ್ಟು, ಬೆಂಗಳೂರು ಉತ್ತರ ಶೇ.50.20ರಷ್ಟು, ಬೆಂಗಳೂರು ದಕ್ಷಿಣ ಶೇ.48.42ರಷ್ಟು, ಬೆಂಗಳೂರು ನಗರ ಶೇ.52.81ರಷ್ಟು ಮತದಾನವಾಗಿದೆ.

