*ವರುಣಾದಲ್ಲಿ ಗೆಲುವಿನ ನಗಾರಿ ಭಾರಿಸಿದ ಸಿದ್ದರಾಮಯ್ಯ; ಮಖಾಡೆ ಮಲಗಿದ ಸಚಿವ ವಿ.ಸೋಮಣ್ಣ*

ಪ್ರಗತಿವಾಹಿನಿ ಸುದ್ದಿ; ಮೈಸೂರು: ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಪ್ರಭಾವಿ ನಾಯಕರು, ಸಚಿವರುಗಳೇ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಮುಂದೆ ಮಖಾಡೆ ಮಲಗಿದ್ದಾರೆ. ಎರಡು ಕ್ಷೇತ್ರಗಳಿಂದ ಕಣಕ್ಕಿಳಿದಿದ್ದ ವಸತಿ ಸಚಿವ ವಿ.ಸೋಮಣ್ಣ ಎರಡೂ ಕ್ಷೇತ್ರಗಳಲ್ಲೂ ಹೀನಾಯವಾಗಿ ಸೋತಿದ್ದಾರೆ.

ವರುಣಾ ಕ್ಷೇತ್ರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿದ್ದ ಸಚಿವ ಸೋಮಣ್ಣ, ತೀವ್ರ ಮುಖಭಂಗ ಅನುಭವಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಭರ್ಜರಿ ಗೆಲುವು ಸಾಧಿಸಿದ್ದಾರೆ.

Home add -Advt

ಇನ್ನೊಂದೆಡೆ ಚಾಮರಾಜನಗರ ಕ್ಷೇತ್ರದಲ್ಲಿಯೂ ವಿ.ಸೋಮಣ್ಣ, ಪರಾಭವಗೊಂಡಿದ್ದು ಅಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ಇದೇ ವೇಳೆ ಬಿಜೆಪಿಯ ಇನ್ನಿಬ್ಬರು ಸಚಿವರಾದ ನಾರಾಯಣಗೌಡ ಹಾಗೂ ಮಾಧುಸ್ವಾಮಿ ಕೂಡ ಸೋಲನುಭವಿಸಿದ್ದು, ಜೆಡಿಎಸ್ ಅಭ್ಯರ್ಥಿಗಳಾದ ಹೆಚ್ ಟಿ ಮಂಜು, ಸುರೇಶ್ ಬಾಬು ಗೆಲುವು ಸಾಧಿಸಿದ್ದಾರೆ.

https://pragati.taskdun.com/vidhanasabha-electionresulthubli-dharawada-centraljagadjsh-shettarlosemahesh-tenginakai-win/

Related Articles

Back to top button