Latest

ನಿಪ್ಪಾಣಿ ತಾಲೂಕು ಕೇಂದ್ರ ಅಭಿವೃದ್ಧಿಗೆ ಪ್ರಥಮ ಆದ್ಯತೆ: ಶಶಿಕಲಾ ಜೊಲ್ಲೆ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ: ನಿಪ್ಪಾಣಿ ತಾಲೂಕು ರಚನೆ ನಂತರ ಸುಮಾರು 5 ಎಕರೆ ಜಾಗದಲ್ಲಿ 10 ಕೋಟಿ ರೂ. ಅಂದಾಜಿನಲ್ಲಿ ಮಿನಿವಿಧಾನ ಸೌಧ, ತಾಲೂಕಾ ಕ್ರೀಡಾಂಗಣ, ಈಜುಗೋಳ ಸೇರಿದಂತೆ ತಾಲೂಕಾ ಕೇಂದ್ರ ಸ್ಥಳಕ್ಕೆ ಬೇಕಾಗುವ ಎಲ್ಲ ಕಚೇರಿಗಳ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿಸಿ ಅವುಗಳನ್ನು ಪೂರ್ಣಗೊಳಿಸುವ ಕಾರ್ಯಕ್ಕೆ ಪ್ರಥಮ ಆದ್ಯತೆ ನೀಡಿರುವುದಾಗಿ ನಿಪ್ಪಾಣಿ ಶಾಸಕಿ,ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಅವರು ಚಿಕ್ಕೋಡಿ ಪಟ್ಟಣದ ಲೋಕಸಭೆ ಸದಸ್ಯರ ಕಾರ್ಯಾಲಯದಲ್ಲಿ ಚಿಕ್ಕೋಡಿ ಪುರಸಭೆ ಸದಸ್ಯರು ಹಾಗೂ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ನಿಪ್ಪಾಣಿ ಕ್ಷೇತ್ರದ ಜನರು ನನ್ನನ್ನು ಮಗಳಾಗಿ ಸ್ವೀಕರಿಸಿದ್ದು ಹ್ಯಾಟ್ರಿಕ್ ಗೆಲುವು ನೀಡಿದ್ದಾರೆ. ಅವರ ಋಣ ನನ್ನ ಮೇಲಿದೆ ಅವರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡುವುದಾಗಿ ತಿಳಿಸಿದರು.

Home add -Advt

ನಿಪ್ಪಾಣಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಅವರು ಬಂದು ತಿರುಗಾಡಿದ ಸ್ಥಳದಲ್ಲಿ 10 ಎಕರೆ ಜಾಗದಲ್ಲಿ 1.33 ಕೋಟಿ ರೂಗಳ ಅಂದಾಜಿನ ಸ್ಮಾರಕ ನಿರ್ಮಿಸಲು ಉದ್ದೇಶಿಸಿದ್ದು, ಈ ಸ್ಥಳದಲ್ಲಿ ಬಡ ಮಕ್ಕಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಿಜ್ಞಾನ ಕೇಂದ್ರ, ಗ್ರಂಥಾಲಯ ನಿರ್ಮಿಸಲು, ಈಜುಗೊಳ ನಿರ್ಮಾಣಕ್ಕೆ 3 ಕೋಟಿ ರೂಗಳ ಅನುದಾನ ಬಿಡುಗಡೆಯಾಗಿದ್ದು ಈಗಾಗಲೇ ಭೂಮಿ ಪೂಜೆ ಕೈಗೊಳ್ಳಲಾಗಿದೆ ಎಂದರು.

ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ತಮ್ಮ ಸ್ಥಳೀಯ ಸಂಸದರ ಅನುದಾನದಡಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.

ಪುರಸಭೆ ಉಪಾಧ್ಯಕ್ಷ ಸಂಜಯ ಕವಟಗಿಮಠ, ಬಾಬು ಮಿರ್ಜೆ, ಸೋಮು ಗವನಾಳೆ, ಕಿರಣ ಯರಂಡೊಳೆ, ಸಂತೋಷ ಜೋಗಳೆ, ಪ್ರಶಾಂತ ಕಾಳಿಂಗೆ, ಸಂತೋಷ ಸೋಲಾಪುರೆ ಉಪಸ್ಥಿತರಿದ್ದರು.

ನಿಪ್ಪಾಣಿ ವಿಧಾನಸಭೆ ಹಾಗೂ ಚಿಕ್ಕೋಡಿ ಕ್ಷೇತ್ರದ ಕಾರ್ಯಕರ್ತರು ಶಶಿಕಲಾ ಜೊಲ್ಲೆ ಅವರು ಹ್ಯಾಟ್ರೀಕ್ ವಿಜಯ ಸಾಧಿಸಿದ ಹಿನ್ನಲೆ ಸನ್ಮಾನಿಸಿ ಗೌರವಿಸಿದರು.

https://pragati.taskdun.com/chance-of-rain-in-many-parts-of-the-state-from-today-meteorological-department-forecast/
https://pragati.taskdun.com/only-10-ministers-sworn-in-in-first-phase/
https://pragati.taskdun.com/dr-bhujanga-shetty-of-narayana-nethralaya-passed-away/

Related Articles

Back to top button