ಪ್ರಗತಿವಾಹಿನಿ ಸುದ್ದಿ, ವ್ಯಾಟಿಕನ್ ಸಿಟಿ: ಸೇಂಟ್ ಪೀಟರ್ಸ್ ಬೆಸಿಲಿಕಾಗೆ ಭೇಟಿ ನೀಡಿದ ವ್ಯಕ್ತಿಯೊಬ್ಬ ತನ್ನ ಬಟ್ಟೆಗಳನ್ನು ಕಳಚಿ ಚರ್ಚ್ನ ಮುಖ್ಯ ಪೀಠದ ಮೇಲೆ ನಿಂತು ರಷ್ಯಾ- ಉಕ್ರೇನ್ನ ಯುದ್ಧದ ವಿರುದ್ಧದ ಪ್ರತಿಭಟಿಸಿದ್ದಾನೆ.
ಈ ವ್ಯಕ್ತಿ ತನ್ನ ಬೆನ್ನಿನ ಮೇಲೆ ಉಕ್ರೇನ್ನ ಮಕ್ಕಳನ್ನು ಉಳಿಸಬೇಕೆಂದು ಸಾರುವ ಚಿತ್ರ ಹೊಂದಿದ್ದನು. ಜೊತೆಗೆ ತನ್ನ ಉಗುರುಗಳಿಂದ ದೇಹದ ಮೇಲೆ ತಾನೇ ಕೆರೆದುಕೊಂಡು ಗಾಯಗಳನ್ನು ಮಾಡಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಈ ಅಪರಿಚಿತ ವ್ಯಕ್ತಿಯನ್ನು ವ್ಯಾಟಿಕನ್ ಸಿಬ್ಬಂದಿ ಇಟಾಲಿಯನ್ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಗುರುವಾರ ಮಧ್ಯಾಹ್ನ ಬೆಸಿಲಿಕಾ ಮುಚ್ಚುವ ಮುನ್ನ ಈ ಘಟನೆ ನಡೆದಿದೆ.
ಹಲವಾರು ಇಟಾಲಿಯನ್ ಮಾಧ್ಯಮಗಳು, ವೆಬ್ಸೈಟ್ಗಳು ಪ್ರವಾಸಿಗರು ತೆಗೆದ ಘಟನೆಯ ಫೋಟೋಗಳನ್ನು ಬಿಡುಗಡೆ ಮಾಡಿವೆ.
https://pragati.taskdun.com/a-woman-sat-late-at-night-at-the-police-station-with-her-four-year-old-child-for-justice/
https://pragati.taskdun.com/extension-of-restraining-order-in-dcm-d-k-shivakumars-disproportionate-assets-case/
https://pragati.taskdun.com/gold-and-silver-prices-decreased-today/
https://pragati.taskdun.com/honble-chief-minister-bommais-letter-to-siddaramaiah/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ