Film & EntertainmentKannada NewsKarnataka NewsLatest

ಸ್ಯಾಂಡಲ್ ವುಡ್ ಅಂಗಳಕ್ಕೆ ಮತ್ತೊಬ್ಬ ಯುವ ನಟನ ಎಂಟ್ರಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ನಟ ಹಾಗೂ ಸ್ಟಾರ್ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಪುತ್ರ ಸಿನಿಮಾ ರಂಗಕ್ಕೆ ಕಾಲಿಡಲು ಸದ್ದಾಗಿ ಸಿದ್ಧರಾಗಿದ್ದಾರೆ. ಈಗಾಗಲೇ ಫ್ಯಾಷನ್ ಲೋಕದಲ್ಲಿ ಮಿಂಚಿನ ಸಂಚಲನ ಮೂಡಿಸಿರುವ ಸಮರ್ಜಿತ್ ಚಿತ್ರರಂಗಕ್ಕೂ ಶೀಘ್ರವೇ ಪಾದಾರ್ಪಣೆ ಮಾಡಲಿದ್ದಾರೆ.

ಬಾಲಿವುಡ್ ಅಂಗಳದಲ್ಲಿ ಸಾಕಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವ ಸಮರ್ಜಿತ್ ಚಿತ್ರರಂಗಕ್ಕೆ ಬರಲು ಸಕಲ ಸಿದ್ಧತೆ ನಡೆಸಿದ್ದಾರೆ. ಮಾರ್ಷಲ್ ಆರ್ಟ್ಸ್, ಸ್ಟಂಟ್ ಡ್ಯಾನ್ಸ್ ಹೀಗೆ ಬಹಳಷ್ಟು ವಿಭಾಗಗಳಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದು ಪರ್ಫೆಕ್ಟ್ ಆ್ಯಕ್ಟರ್ ಆಗಿ ಚಿತ್ರರಂಗಕ್ಕೆ ಕಾಲಿಡಬೇಕು ಎಂದು ನಿರ್ಧಾರ ಮಾಡಿದ್ದಾರೆ. ಈಗಾಗಲೇ ಸಮರ್ಜಿತ್ ತಂದೆ ಸ್ಯಾಂಡಲ್ ವುಡ್ ಹಾಗೂ ಬಾಲಿವುಡ್ ನಲ್ಲಿ ಸ್ಟಾರ್ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದು, ಮಗ ಕೂಡ ತಂದೆಯಂತೆ ಚಿತ್ರರಂಗದಲ್ಲಿ ತಮ್ಮನ್ನ ತಾವು ತೊಡಗಿಸಿಕೊಳ್ಳಲು ತಯಾರಿ ಮಾಡಿಕೊಂಡಿದ್ದಾರೆ.

Home add -Advt

ಇತ್ತೀಚಿಗಷ್ಟೇ ರೆಡ್ ಎಫ್ಎಂ ಮ್ಯೂಸಿಕ್ ಕಾನ್ಸರ್ಟ್ ನಲ್ಲಿ ಸಮರ್ಜಿತ್ ರ‍್ಯಾಂಪ್ ವಾಕ್ ಮಾಡುವ ಮೂಲಕ ಫ್ಯಾಷನ್ ಲೋಕದಲ್ಲಿಯೂ ತೊಡಗಿಸಿಕೊಂಡು ಮಿಂಚುವ ಸೂಚನೆ ಕೊಟ್ಟಿದ್ದಾರೆ. ಇನ್ನು ಸಮರ್ಜಿತ್ ಚಿತ್ರರಂಗಕ್ಕೆ ಬೇಕಿರುವಂತೆ ಥಿಯೇಟರ್ ನಲ್ಲಿ ಪದವಿ ಪಡೆದುಕೊಂಡಿದ್ದು ಆ್ಯಕ್ಟಿಂಗ್ ವರ್ಕ್ ಶಾಪ್ ಅನ್ನು ನ್ಯೂಯಾರ್ಕ್ ನಲ್ಲಿ ಮುಗಿಸಿಕೊಂಡು ಬಂದಿದ್ದಾರೆ.

ಈಗಾಗಲೇ ಸಾಕಷ್ಟು ಬ್ರಾಂಡ್ ಗಳಿಗೆ ಮಾಡೆಲ್ ಆಗಿರುವ ಅವರು, ರಂಗಶಂಕರ ರಂಗಮಂದಿರದಲ್ಲಿ ಸಾಕಷ್ಟು ನಾಟಕಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ಸಮರ್ಜಿತ್ ಚಿತ್ರರಂಗದ ಎಂಟ್ರಿಗೆ ಈಗಾಗಲೇ ಇಂದ್ರಜಿತ್ ಸಾಕಷ್ಟು ತಯಾರಿಯನ್ನು ಮಾಡಿಕೊಂಡಿದ್ದು ಶೀಘ್ರದಲ್ಲೇ ಕನ್ನಡ ಸಿನಿಮಾರಂಗಕ್ಕೆ ತಮ್ಮ ಪುತ್ರನನ್ನ ನಾಯಕನಾಗಿ ಪರಿಚಯಿಸಲಿದ್ದಾರೆ.

Related Articles

Back to top button