Kannada NewsKarnataka NewsLatestPolitics

*ಗುತ್ತಿಗೆದಾರರನ್ನು ಯಾವ ನಾಯಕರ ಮನೆಗೆ ಯಾರು ಕಳುಹಿಸುತ್ತಿದ್ದಾರೆ ಗೊತ್ತಿದೆ; ವಿಪಕ್ಷ ನಾಯಕರಿಗೆ ಡಿಸಿಎಂ ತಿರುಗೇಟು*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾಮಗಾರಿಗಳ ಟೆಂಡರ್ ವಿಚಾರದಲ್ಲಿ ಭ್ರಷ್ಟಾಚಾರದ ಬಗ್ಗೆ ಕೆಂಪಣ್ಣ ಅವರು ದೂರು ನೀಡಿದ್ದು ಅವರಿಗೆ ನ್ಯಾಯ ಒದಗಿಸಬೇಕು. ಅದಕ್ಕಾಗಿ ಕಾನೂನು ಪ್ರಕಾರ ತನಿಖೆ ಮಾಡಲು ಹೇಳಿದ್ದೇವೆ.” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

Home add -Advt

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳು ಗುತ್ತಿಗೆದಾರರು ಪ್ರತಿ ಪಕ್ಷ ನಾಯಕರ ಭೇಟಿ ವಿಚಾರವಾಗಿ ಕೇಳಿದ ಪ್ರಶ್ನೆಗೆ ಡಿಸಿಎಂ ಪ್ರತಿಕ್ರಿಯಿಸಿದರು.

ಸರಿಯಾಗಿ ಕೆಲಸ ಮಾಡಿರುವ ಗುತ್ತಿಗೆದಾರರಿಗೆ ನ್ಯಾಯ ಒದಗಿಸಲು ಸರ್ಕಾರ ಬದ್ಧವಾಗಿದೆ. ಕೆಲವು ಗುತ್ತಿಗೆದಾರರನ್ನು ಮಾಧ್ಯಮಗಳ ಮುಂದೆ ಯಾರು ಮಾತನಾಡುತ್ತಿದ್ದಾರೆ, ದೆಹಲಿಗೆ ಯಾರು ಕರೆಯುತ್ತಿದ್ದಾರೆ, ಯಾವ ನಾಯಕರ ಮನೆಗೆ ಯಾರು ಕಳಿಸುತ್ತಿದ್ದಾರೆ ಎಂಬ ವಿಚಾರ ನನಗೆ ಗೊತ್ತಿದೆ ಎಂದರು.

Related Articles

Back to top button