Belagavi NewsBelgaum NewsKannada NewsKarnataka NewsLatestUncategorized

ನಗರ ಸಂಚಾರ ನಡೆಸಿ ಸ್ವಚ್ಛತಾ ವ್ಯವಸ್ಥೆ ಪರಿಶೀಲಿಸಿದ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಹಾನಗರ ಪಾಲಿಕೆಯ ಆಯುಕ್ತರಾದ ಅಶೋಕ ದುಡಗುಂಟಿ ಅವರು ನಗರದ ವಿವಿಧ ಪ್ರದೇಶಗಳಿಗೆ ಇಂದು ಬೆಳಗ್ಗೆ ಭೇಟಿ ನೀಡಿ ಕಸ ವಿಲೇವಾರಿಯನ್ನು ಪರಿಶೀಲಿಸಿದರು.

ಇದೇ ಸಂದರ್ಭದಲ್ಲಿ ನಾಗರಿಕರ ಅಹವಾಲುಗಳನ್ನು ಆಲಿಸಿ ಸೂಕ್ತ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Home add -Advt

ಬೆಳಗ್ಗೆ 5.30ಕ್ಕೆ ಸದಾಶಿವ ನಗರದಲ್ಲಿನ ವಾಹನ ಶಾಖೆಗೆ ತೆರಳಿ, ವಾಹನಗಳನ್ನು ಪರಿಶೀಲಿಸಿ, ವಾಹನ ಚಾಲಕರ ಹಾಜರಾತಿ ಪರಿಶೀಲಿಸಿದರು. ಎಲ್ಲ ವಾಹನ ಚಾಲಕರಿಗೆ ಹಾಗೂ ಕ್ಲೀನರ್ ಗಳಿಗೆ ಬೆಳಗ್ಗೆ 5.45 ಕ್ಕೆ ಕರ್ತವ್ಯಕ್ಕೆ ಹಾಜರಾಗಿ ಸರಿಯಾಗಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿ, ಸ್ವತಃ ಪಾಲಿಕೆಯ ಕಸದ ವಾಹನದಲ್ಲಿ ಕುಳಿತು ಕಿಲ್ಲಾಕೆರೆ ಬಿಟ್ ಕಚೇರಿಗೆ ಭೇಟಿ ನೀಡಿ ಪೌರಕಾರ್ಮಿಕರ ಹಾಜರಾತಿ ಪರಿಶೀಲಿಸಿ, ಆರೋಗ್ಯ ನಿರೀಕ್ಷಕರಿಗೆ ನಿರ್ದೇಶನ ನೀಡಿದರು.

ನಂತರ ನಗರ ಸೇವಕರಾದ ಅಫ್ರೋಜ್ ಮುಲ್ಲಾ ಅವರೊಂದಿಗೆ ವಾರ್ಡ್ ನಂ. 5 ರ ಖಡೇಬಜಾರ ಹಾಗೂ ದರ್ಬಾರ್ ಗಲ್ಲಿ ಕಸ ವಿಲೇವಾರಿ ಪರಿಶೀಲಿಸಿ, ಸಂಬಂಧಪಟ್ಟ ನಿರೀಕ್ಷಕರಿಗೆ ಸೂಕ್ತ ನಿರ್ದೇಶನ ನೀಡಿದರು. ಸಾರ್ವಜನಿಕರ ಅಹವಾಲುಗಳ ಕುರಿತು ಚರ್ಚಿಸಿ, ಸಂಬಂಧಪಟ್ಟವರಿಗೆ ನಿರ್ದೇಶನ ನೀಡಿದರು.

ನಂತರ ಕೋತ್ವಾಲ್ ಗಲ್ಲಿ ಮತ್ತು ಕಾಕರ ಗಲ್ಲಿ ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿ, ತರಕಾರಿ ಮಾರುಕಟ್ಟೆಯ ತ್ಯಾಜ್ಯವೂ ಅದೇ ದಿನ ರಾತ್ರಿ 9 ಗಂಟೆ ನಂತರ ನಂತರ ವಿಲೇವಾರಿಯಾಗಬೇಕೆಂದು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಿದರು. ನಂತರ ಬೃಹತ್ ತ್ಯಾಜ್ಯ ಉತ್ಪಾದಕರಾದ ಪೈ ಹೋಟೆಲ್ ಗೆ ಭೇಟಿ ನೀಡಿ, ಹಸಿ ತ್ಯಾಜ್ಯ ಸಂಸ್ಕರಣೆ ಘಟಕವನ್ನು ಪರಿಶೀಲಿಸಿದರು.

ಅದೇ ರೀತಿ ಎಲ್ಲ ಬೃಹತ್ ತ್ಯಾಜ್ಯ ಉತ್ಪಾದಕರಿಗೆ ನಿರ್ದೇಶನ ನೀಡಲು ಸಭೆ ಕರೆಯಲು ಪರಿಸರ ಅಭಿಯಂತರರಿಗೆ ನಿರ್ದೇಶನ ನೀಡಿದರು. ಅಲ್ಲಿಂದ ಕೇಂದ್ರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ದಂಡು ಮಂಡಳಿಯ ಅಧಿಕಾರಿಗಳನ್ನು ಕಸವನ್ನು ಸರಿಯಾದ ಸಮಯಗೆ ವಿಲೇವಾರಿ ಮಾಡಲು ಸೂಕ್ತ ನಿರ್ದೇಶನ ನೀಡಿದರು.

ರುಕ್ಮಿಣಿ ನಗರ ಸೇವಕರೊಂದಿಗೆ ವಾರ್ಡ್ ಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಕೇಳಿ ಸ್ವಚ್ಛತೆಯನ್ನು ಕಾಪಾಡಲು ಸಂಬಂಧಪಟ್ಟ ಆರೋಗ್ಯ ನಿರೀಕ್ಷಕರಿಗೆ ನಿರ್ದೇಶನ ನೀಡಿದರು. ಅದೇ ರೀತಿ ರುಕ್ಮಿಣಿ ನಗರ, ಉದ್ಯಾನವನಕ್ಕೆ ಭೇಟಿ ನೀಡಿ ಗಾರ್ಡನ್ ನಿರೀಕ್ಷಕರಿಗೆ ಸಸಿ ನೀಡಲು ನಿರ್ದೇಶನ ನೀಡಿದರು.

Related Articles

Back to top button