ಪ್ರಗತಿವಾಹಿನಿ ಸುದ್ದಿ; ಚೆನ್ನೈ: ಬಹುಭಾಷಾ ನಟಿ, ಮಜಿ ಸಂಸದೆ ಜಯಪ್ರದಾ ಅವರಿಗೆ ಚೆನ್ನೈ ಕೋರ್ಟ್ ಜೈಲುಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
6 ತಿಂಗಳು ಜೈಲುಶಿಕ್ಷೆ ಜೊತೆಗೆ 5ಸಾವಿರ ರೂಪಾಯಿ ದಂಡ ವಿಧಿಸಿ ಕೋರ್ಟ್ ತೀರ್ಪು ಪ್ರಕಟಿಸಿದೆ. ಜಯಪ್ರದಾ ನಡೆಸುತ್ತಿದ್ದ ಚಿತ್ರಮಂದಿರದ ಕೆಲಸಗಾರರಿಗೆ ಸೂಕ್ತ ಇಎಸ್ ಐ ಹಣ ನೀಡಿಲ್ಲ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೇಸ್ ಕೋರ್ಟ್ ಮೆಟ್ಟಿಲೇರಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಜಯಪ್ರದಾ ಅವರಿಗೆ 6 ತಿಂಗಳು ಜೈಲುಶಿಕ್ಷೆ ವಿಧಿಸಿದೆ. ಈ ಹಿಂದೆ ಥಿಯೇಟರ್ ವಿಚಾರವಾಗಿಯೇ ತೆರಿಗೆ ಹಣ ಪಾವತಿ ಮಡಿಲ್ಲ ಎಂದು ಜಯಪ್ರದಾ ವಿರುದ್ಧ ದೂರು ದಾಖಲಾಗಿತ್ತು. ಕೋರ್ಟ್ ಆದೇಶದಂತೆ ಥಿಯೆಟರ್ ನ ಕುರ್ಚಿ, ಪ್ರಾಜೆಕ್ಟರ್ ಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದರು. ಕಾರ್ಮಿಕರು ತಮಗೆ ಇಎಸ್ ಐ ಪಾವತಿ ಮಾಡಿಲ್ಲ ಎಂದು ಜಯಪ್ರದಾ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ