LatestPolitics

ಛತ್ತೀಸಗಡ ಆಖಾಡದಲ್ಲಿ ಬೆಳಗಾವಿ ಶಾಸಕನ `ಮಾಸ್ಟರ್’ ಪ್ಲ್ಯಾನ್

ಪ್ರಗತಿವಾಹಿನಿ ಸುದ್ದಿ, ಛತ್ತೀಸಗಡ– ದೇಶದಲ್ಲಿ ಪಂಚರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಪಂಚರಾಜ್ಯಗಳಲ್ಲಿ ಗೆಲುವು ಸಾಧಿಸಲು ಬಿಜೆಪಿ ತಾಲೀಮು ಶುರುವಾಗಿದೆ. ಈ ಕುರಿತು ಛತ್ತೀಸಗಡ ರಾಯಾಪೂರದಲ್ಲಿ ಪಂಚರಾಜ್ಯಗಳ ಆಯ್ದ ಶಾಸಕರ ಮಹತ್ವದ ಅಭ್ಯಾಸ ವರ್ಗ ನಡೆಯಿತು.

ಈ ಅಭ್ಯಾಸ ವರ್ಗದಲ್ಲಿ ಬೆಳಗಾವಿ ದಕ್ಷಿಣ ಮತ್ಷೇತ್ರದ ಶಾಸಕ ಅಭಯ ಪಾಟೀಲ ಚುನಾವಣೆಯಲ್ಲಿ  ಅನುಸರಿಸಬೇಕಾದ ತಂತ್ರಗಾರಿಕೆಯ ಬಗ್ಗೆ ಪಂಚರಾಜ್ಯಗಳ ಶಾಸಕರಿಗೆ ವಿಶೇಷ ಉಪನ್ಯಾಸ ಮಾಡಿದರು.

Home add -Advt

 ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ, ಆಸ್ಸಾಂ ಹಾಗೂ ಓಡಿಸಾ ರಾಜ್ಯಗಳ ಸುಮಾರು 55 ಶಾಸಕರು ಹಾಗೂ ಪಂಚರಾಜ್ಯಗಳ ಬಿಜೆಪಿಯ ವಿಶೇಷ ಪ್ರತಿನಿಧಿಗಳು ಈ ಅಭ್ಯಾಸ ವರ್ಗದಲ್ಲಿ ಭಾಗವಹಿಸಿದ್ದರು. ಎಂಟು ದಿನಗಳ ಕಾಲ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮಾಡಬೇಕಾದ ಪಕ್ಷದ ಚಟುವಟಿಕೆ ಮತ್ತು ಗೆಲುವಿನ ಕಾರ್ಯವಿಧಾನಗಳ ಬಗ್ಗೆ ಶಾಸಕ ಅಭಯ ಪಾಟೀಲ ಅವರು ಟ್ರೇನಿಂಗ್ ನಿಡುವ ಮೂಲಕ ಪಂಚರಾಜ್ಯಗಳ ಗಮನ ಸೆಳೆದರು.

ಈ ಕಾರ್ಯಕ್ರಮದಲ್ಲಿ ಛತ್ತೀಸಗಡ ಅಭಿಯಾನದ ಪ್ರಭಾರಿಯಾಗಿದ್ದ ಅಭಯ ಪಾಟೀಲ, ಛತ್ತೀಸಗಡ ಬಿಜೆಪಿ ರಾಜ್ಯಾಧ್ಯಕ್ಷ ಅರುಣ ಶಾವೋ, ಛತ್ತೀಸಗಡ ವಿರೋಧ ಪಕ್ಷದ ನಾಯಕ ನಾರಾಯಣ ಜೀ ಹಾಗೂ ಪಂಚ ರಾಜ್ಯಗಳ ಬಿಜೆಪಿಯ ಪ್ರಮುಖ ನಾಯಕರು ಭಾಗವಹಿಸಿದ್ದರು.

Related Articles

Back to top button