Belagavi NewsBelgaum NewsKannada NewsKarnataka NewsUncategorized

ಮಾತೃ ಭಾರತಿ ಜಿಲ್ಲಾ ಸಮ್ಮೇಳನ: ವಿವಿಧ ಉಪನ್ಯಾಸ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮಾತೃ ಭಾರತಿ ಜಿಲ್ಲಾ ಸಮ್ಮೇಳನ ಸಂತ ಮೀರಾ ಶಾಲೆಯಲ್ಲಿ ಜರುಗಿತು. ಒಟ್ಟು ೫ ಶಾಲೆಗಳಿಂದ ೧೩೦ ಮಾತೆಯರು ಭಾಗವಹಿಸಿದ್ದರು.

ಮುಖ್ಯ ವಕ್ತಾರರಾಗಿ ತೃಪ್ತಿ ಹಿರೇಮಠ ಅವರು “ಮನೆಯೇ  ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರು” ಈ ವಿಷಯ ಕುರಿತು ಹಾಗೂ ಡಾ . ಸೋನಾಲಿ ಸರ್ನೋಬತ್ ಅವರು “ಸಹಜವಾಗಿ ವ್ಯಕ್ತಿತ್ವ ವಿಕಸನ, ಆಹಾರ, ಸಮಯದ ಸದುಪಯೋಗ ” ಈ ವಿಷಯ ಕುರಿತು ಮಾತನಾಡಿದರು.

ಸಮ್ಮೇಳನದ ಅಧ್ಯಕ್ಷರಾಗಿ ಶ್ರೀಮತಿ ಪ್ರಿಯಾ ಪುರಾಣಿಕ್ ಮಾತನಾಡಿದರು. ವಿದ್ಯಾ ಭಾರತಿ ಪ್ರಾಂತ ಅಧ್ಯಕ್ಷರಾದ ಪರಮೇಶ್ವರ ಹೆಗಡೆ, ಜಿಲ್ಲಾ ಅಧ್ಯಕ್ಷರಾದ ಮಾಧವ ಪುಣೇಕರ, ಜಿಲ್ಲಾ ಉಪಾಧ್ಯಕ್ಷ ರಾದ ರಾಮನಾಥ್ ನಾಯಕ ಪ್ರಾಂತ ಸಹ ಕಾರ್ಯದರ್ಶಿ ಸುಜಾತಾ ದಪ್ತರದಾರ, ಶಾಲಾ ಆಡಳಿತ ಅಧಿಕಾರಿ ರಾಘವೇಂದ್ರ ಕುಲಕರ್ಣಿ ಉಪಸ್ಥಿತರಿದ್ದರು.

ನವೆಂಬರ್ ನಲ್ಲಿ ನಡೆಯುವ ಮಾತೃ ಭಾರತಿ ಪ್ರಾಂತ ಸಮ್ಮೇಳನದ ಮಾಹಿತಿ ನೀಡಲಾಯಿತು.

ಕಾರ್ಯಕ್ರಮದ ನಿರೂಪಣೆ ಸರೋಜಾ ಕಟಗೇರಿ, ಪ್ರಾರ್ಥನೆ ಅಮೃತಾ ಪೇಟಕರ ರೀಟಾ ದೊಂಗಡಿ, ಅತಿಥಿಗಳ ಪರಿಚಯ ಮತ್ತು ಸ್ವಾಗತ ಅರುಣಾ ಪುರೋಹಿತ ವಂದನಾರ್ಪಣೆ ಮಾತೃ ಭಾರತಿ ಸದಸ್ಯೆ ಭಾಗ್ಯಶ್ರೀ ಶಾಬಾದಿ.

ಜಿಲ್ಲಾ ಮಾತೃ ಭಾರತಿ ಪ್ರಮುಖರಾದ ತಿಲೋತ್ತಮಾ ಗುಮಾಸ್ತೆ, ಸಹ ಪ್ರಮುಖರಾದ ವೀಣಾ ಜೋಶಿ ಹಾಗೂ ಸವಿತಾ ಪಾಟಣಕರ , ಸೀಮಾ ಕಾಮತ ಸಹಕಾರ ನೀಡಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button