Kannada NewsLatestNational

ಯೂಟ್ಯೂಬ್ ವಿಡಿಯೊ ನೋಡಿ ಹೆರಿಗೆ ಮಾಡಿಸಲು ಹೋಗಿ ಪತ್ನಿ ಪ್ರಾಣ ತೆಗೆದ ಗಂಡ; ಚೊಚ್ಚಲ ಹೆರಿಗೆಯಲ್ಲೇ ದುರಂತ

ಪ್ರಗತಿವಾಹಿನಿ ಸುದ್ದಿ, ಚೆನ್ನೈ: ಸಾಮಾಜಿಕ ಜಾಲತಾಣಗಳನ್ನು ಮನಬಂದಂತೆ ಬಳಸುವ ಹುಂಬತನದ ಅನಾಹುತಗಳನ್ನು ಸೃಷ್ಟಿಸಿದ್ದೇ ಹೆಚ್ಚು.

ಇಂಥದ್ದೇ ಪ್ರಕರಣವೊಂದು ತಮಿಳುನಾಡಿನಲ್ಲಿ ಚೊಚ್ಚಲ ಹೆರಿಗೆ ವೇಳೆಗೆ ಮಹಿಳೆಯ ಬಲಿ ಪಡೆದಿದೆ. 27 ವರ್ಷದ ಮಹಿಳೆಯೊಬ್ಬರು ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ ನಂತರ ಸಾವನ್ನಪ್ಪಿದ್ದಾರೆ. ಪುಲ್ಲಿಯಮಟ್ಟಿಯ ಎಂ. ಲೋಗಾನ್ಯಗಿ ಮೃತಪಟ್ಟವರು.

ಆಕೆಯ ಪತಿ ಡಿ. ಮಾದೇಶ (27) ತುಂಬು ಗರ್ಭಿಣಿಗೆ ಹೆರಿಗೆಗೆ ಆಸ್ಪತ್ರೆಗೆ ಸೇರಿಸುವ ಬದಲು ಯೂಟ್ಯೂಬ್ ವೀಡಿಯೊಗಳ ಸಹಾಯದಿಂದ ಮನೆಯಲ್ಲೇ ಪ್ರಯತ್ನಿಸಿದ್ದಾರೆ. ಆದರೆ ಹೊಕ್ಕುಳಬಳ್ಳಿಯನ್ನು ಸರಿಯಾಗಿ ಕತ್ತರಿಸಲು ವಿಫಲವಾದ ಕಾರಣ ಮಹಿಳೆ ತೀವ್ರ ರಕ್ತದ ನಷ್ಟವನ್ನು ಅನುಭವಿಸಿ ಮೃತಪಟ್ಟರು.

ಮಾದೇಶ ಯೂಟ್ಯೂಬ್ ಚಾನೆಲ್‌ಗಳಲ್ಲಿ ಮನೆಯಲ್ಲಿ ಹೆರಿಗೆಯ ವೀಡಿಯೊಗಳನ್ನು ವೀಕ್ಷಿಸಿ ತಾನೇ ವೈದ್ಯರ ಕೆಲಸ ಮಾಡಲು ಹೊರಟಿರುವುದು ಈ ದುರಂತಕ್ಕೆ ಕಾರಣವಾಗಿದೆ ಎಂದು ಅವರ ನೆರೆಹೊರೆಯವರು ಆರೋಪಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button