Kannada NewsKarnataka NewsLatest

*ಅಕ್ರಮವಾಗಿ ದಾಸ್ತಾನು ಮಾಡಿದ್ದ 64.950 ಕೆಜಿ ತೂಕದ ಶ್ರೀಗಂಧ ವಶಕ್ಕೆ*

ಪ್ರಗತಿವಾಹಿನಿ ಸುದ್ದಿ; ಶಿರಸಿ: ಮನೆಯ ಹಿಂಬಾಗದಲ್ಲಿ ಅಕ್ರಮ‌ವಾಗಿ ದಾಸ್ತಾನು‌‌ ಮಾಡಿದ್ದ 64.950 ಕೆಜಿ ತೂಕದ 15 ಶ್ರೀಗಂಧದ ತುಂಡುಗಳನ್ನು ಅರಣ್ಯ ಸಂಚಾರಿದಳ ವಶಕ್ಕೆ ಪಡೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ನರೂರು ಗ್ರಾಮದಲ್ಲಿ ನಡೆದಿದೆ.

ನರೂರು ಗ್ರಾಮದ ಸದಾನಂದ ಬಸಪ್ಪ‌ ಗೌಡ ಅವರ ಮನೆಯ ಹಿಂಬಾಗದಲ್ಲಿ ಕಾನೂನು ಬಾಹಿರವಾಗಿ‌ ಶ್ರೀಗಂಧದ ತುಂಡುಗಳನ್ನು ದಾಸ್ತಾನು ಇಡಲಾಗಿತ್ತು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಸುಮಾರು 2 ಲಕ್ಷ 25 ಸಾವಿರ ಮೌಲ್ಯದ ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಸದಾನಂದ ಬಸಪ್ಪ ಗೌಡ ತಲೆಮರೆಸಿಕೊಂಡಿದ್ದು, ಆರೋಪಿ ಪತ್ತೆಗೆ ಬಲೆಬೀಸಲಾಗಿದೆ.

Home add -Advt

ಅರಣ್ಯ ಸಂಚಾರಿದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಬ್ದುಲ್ ಅಜೀಜ್ ಅಹಮದ್ ಶೇಖ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್ ಎಮ್‌ ವಾಲಿ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಅಜಯ್ ನಾಯ್ಕ್, ಉಪ ವಲಯ ಅರಣ್ಯಾಧಿಕಾರಿಗಳಾದ ಇಲಿಯಾಸ್ ಶೇಖ್,ರಾಜು ಪೂಜಾರ,ಚಿದಂಬರ‌ ಗೌಡ ಹಾಗೂ‌‌ ಚಾಲಕ ನಂದೀಶ್ ಗಾಡಿಗೇರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Related Articles

Back to top button