Kannada NewsKarnataka NewsLatest
*ತೆರಿಗೆ ವಂಚಿತರಿಗೆ IT ಶಾಕ್*

10ಕ್ಕೂ ಹೆಚ್ಚು ಕಡೆ ದಾಳಿ
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಂ ಬೆಳಿಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿ, ತೆರಿಗೆ ವಂಚಿತರಿಗೆ ಶಾಕ್ ಕೊಟ್ಟಿದ್ದಾರೆ.
ಬೆಂಗಳೂರಿನ 10ಕ್ಕೂ ಹೆಚ್ಚು ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಐಟಿ ಬಿಟಿಗೆ ಸೇರಿದ ಕೆಲ ಖಾಸಗಿ ಕಂಪನಿಗಳ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬಾಗನಮನೆ ಟೆಕ್ ಪಾರ್ಕ್ ನ ಕೆಲ ಕಂಪನಿಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ತೆರಿಗೆ ವಂಚನೆ ಆರೊಪ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಸಿ.ವಿ.ರಾಮನ್ ನಗರ, ಹುಳಿಮಾವು ಸೇರಿದಂತೆ ಹಲವೆಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.



