Belagavi NewsBelgaum NewsKannada NewsKarnataka NewsLatest

*ಹೊಟ್ಟೆನೋವು ತಾಳಲಾರದೇ ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ಚಿಕಿತ್ಸೆ ಫಲಿಸದೇ ಸಾವು*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಹೊಟ್ಟೆನೋವು ತಾಳಲಾರದೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ಕಬ್ಬೂರ ಪಟ್ಟಣದ ಬೆಲ್ಲದ ಬಾಗೇವಾಡಿಯಲ್ಲಿ ನಡೆದಿದೆ.

ಪಲ್ಲವಿ (19) ಮೃತ ಯುವತಿ. ಬೆಲ್ಲದ-ಬಾಗೇವಾಡಿ ರಸ್ತೆಗೆ ಹೊಂದಿಕೊಂಡ ತೋಟದ ಮನೆಯ ನಿವಾಸಿ. ಹೊಟ್ಟೆ ನೋವು ತಾಳಲಾರದೆ ಕಳೆದ ಎಂಟು ದಿನಗಳ ಹಿಂದೆವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ ಸಿದ್ದಳು. ಚಿಕಿತ್ಸೆಗಾಗಿ ಸಮೀಪದ ಘಟಪ್ರಭಾ ಕೆ.ಎಚ್. ಐ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಯುವತಿ ಮೃತಪಟ್ಟಿದ್ದಾಳೆ. ಫಟನಾ ಸ್ಥಳಕ್ಕೆ ಚಿಕ್ಕೋಡಿ ಪಿ ಎಸ್. ಐ ಬಸಗೌಡ ನೆರ್ಲಿ ಆಗಮಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button