*2,526 ರೂ. ಬಿಲ್ ಬದಲು 68,526 ರೂ ಬಿಲ್; ಬೆಸ್ಕಾಂ ವಿರುದ್ಧ ಕಿಡಿ ಕಾರಿದ ಮಾಜಿ ಸಿಎಂ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ದೀಪಾವಳಿ ವೇಳೆ ಮನೆಯ ದೀಪಾಲಂಕಾರಕ್ಕಾಗಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದ ಪ್ರಕರಣ ಸಂಬಂಧ ಬೆಸ್ಕಾಂ ಬರೋಬ್ಬರಿ 68,526 ರೂಪಾಯಿ ದಂಡ ವಿಧಿಸಿದೆ.
ದಂಡದ ಮೊತ್ತ ಪಾವತಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ದಂಡದ ಬಿಲ್ ಮೊತ್ತ ಸರಿಯಾಗಿಲ್ಲ ಎಂದು ಕಿಡಿ ಕಾರಿದ್ದಾರೆ.
71 ಯೂನಿಟ್ ಗೆ ಬೆಸ್ಕಾಂ ನವರು 3ಪಟ್ಟು ಡಂಡ ವಿಧಿಸಿದ್ದಾರೆ. ಬೆಸ್ಕಾಂ ಲೆಕ್ಕದ ಪ್ರಕಾರ 2.5 ಕಿ.ವ್ಯಾ ವಿದ್ಯುತ್ ಬಳಕೆಯಾಗಿದೆ ಅಂತ ಇದೆ. 7 ದಿನಕ್ಕೆ 71 ಯುನಿಟ್ ಆಗಲಿದೆ ಅಂತ ಕೊಟ್ಟಿದ್ದಾರೆ. ಅಂದರೆ ಬೆಸ್ಕಾಂ ಇಲಾಖೆ 2,526 ರೂಪಾಯಿ ಫೈನ್ ಹಾಕಬೇಕಿತ್ತು. ಆದರೆ 68,526 ರೂಪಾಯಿ ದಂಡ ವಿಧಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಲ್ ಬಗ್ಗೆ ಮರುಪರಿಶೀಲಿಸುವಂತೆ ಹೇಳಿದ್ದೇನೆ. ನೀವು ನೀಡಿದ ಬಿಲ್ ಕೂಡ ಸರಿಯಿಲ್ಲ ಅಂತ ಪ್ರತಿಭಟನೆ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಲುಲು ಮಾಲ್ ಆರಂಭದ 6 ತಿಂಗಳು ಕರೆಂಟ್ ಬಿಲ್ ನೀಡಿಲ್ಲ. ಲುಲು ಮಾಲ್ ಬಳಕೆ ಮಾಡಿದ್ದ ವಿದ್ಯುತ್ ಗೆ ದಂಡ ಹಾಕ್ತೀರಾ? ಹೈಟೆನ್ಶನ್ ವೈರ್ ಅಂಡರ್ ಗ್ರೌಂಡ್ ನಲ್ಲಿ ತೆಗೆದುಕೊಂಡು ಮಾಲ್ ಗೆ ಅಕ್ರಮ ವಿದ್ಯುತ್ ಸಂಪರ್ಕ ಮಾಡಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ