Kannada NewsKarnataka News
ನಡುಗಡ್ಡೆಯಂತಾದ ಖಾನಾಪುರ ತಾಲೂಕು
ನಡುಗಡ್ಡೆಯಂತಾದ ಖಾನಾಪುರ ತಾಲೂಕು
ಪ್ರಗತಿವಾಹಿನಿ ಸುದ್ದಿ, ಖಾನಾಪುರ-
ಭಾರಿ ಮಳೆಯಿಂದಾಗಿ ಖಾನಾಪುರ ತಾಲೂಕು ನಡುಗಡ್ಡೆಯಂತಾಗಿದೆ.
ಮಲಪ್ರಭಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಬಹುತೇಕ ಎಲ್ಲ ಮಾರ್ಗಗಳೂ ಸಂಪರ್ಕ ಕಡಿದುಕೊಂಡಿವೆ. ಸೇತುವೆಗಳ ಮೇಲೆ ನೀರು ನುಗ್ಗಿದೆ. ಸಾವಿರಾರು ಮನೆಗಳಿಗೂ ನೀರು ಆವರಿಸಿದೆ.
ತಾಲೂಕಿನಲ್ಲಿ ನೂರಾರು ಮನೆಗಳಿಗೆ ಧಕ್ಕೆಯಾಗಿದೆ. ಹಟ್ಟಿಹೊಳಿಯ ಶಾಂತವ್ವ ಶಿವಪ್ಪ ಗೋಣಿ ಅವರ ಮನೆ ಕುಸಿದು ಬಿದ್ದಿದೆ.
ತಾಲೂಕಿನಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ. 60ಕ್ಕೂ ಹೆಚ್ಚು ಗ್ರಾಮಗಳು ಸಂಪರ್ಕ ಕಡಿದುಕೊಂಡಿವೆ.
ಇದನ್ನೂ ಓದಿ – ಖಾನಾಪುರಕ್ಕೆ ಎರಡೇ ಮಾರ್ಗ; ರೈಲು ಮಾರ್ಗವೂ ಡೇಂಜರ್




