Kannada NewsKarnataka NewsLatest
*ಹಾವು ಕಡಿದು ದುರಂತ; ವಿದ್ಯಾರ್ಥಿನಿ ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ಶಾಲೆಗೆ ಹೋಗಿದ್ದ ವಿದ್ಯಾರ್ಥಿನಿಯೋರ್ವಳು ಹಾವು ಕಡಿದು ಸಾವನ್ನಪ್ಪಿರುವ ದಾರುಣ ಘಟನೆ ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕಿನಲ್ಲಿ ನಡೆದಿದೆ.
ಅಫಜಲಪುರ ತಾಲೂಕಿನ ಬಿಲ್ವಾಡ್ (ಬಿ) ಗ್ರಾಮದಲ್ಲಿ ಈ ದುರಂತ ನಡೆದಿದೆ. ಸೋನಿಕಾ ಪಾಟೀಲ್ (10) ಮೃತ ವಿದ್ಯಾರ್ಥಿನಿ. ಮೃತ ವಿದ್ಯಾರ್ಥಿನಿ ಸೋನಿಕಾ ಪಾಟೀಲ್ 4ನೇ ತರಗತಿಯಲ್ಲಿ ಓದುತ್ತಿದ್ದಳು.
ಶಾಲೆಗೆ ಹೋಗಿದ್ದ ವಿದ್ಯಾರ್ಥಿನಿ ಮನೆಗೆ ವಾಪಾಸ್ ಆಗುತ್ತಿದ್ದಾಗ ಹಾವು ಕಡಿದು ಸಾವನ್ನಪ್ಪಿದ್ದಾಳೆ. ನಿನ್ನೆ ಸಂಜೆ ಮನೆಗೆ ಬರುತ್ತಿದ್ದಾಗ ಹಾವು ಕಡಿದಿತ್ತು ಎಂದು ತಿಳಿದುಬಂದಿದೆ.
ಅಫಜಲಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


