Kannada NewsKarnataka NewsLatest

*ಕಲಬುರ್ಗಿ ವಕೀಲನ ಹತ್ಯೆ ಪ್ರಕರಣ ; ಪ್ರಮುಖ ಆರೋಪಿ ಸೇರಿ ಮೂವರು ಅರೆಸ್ಟ್*

ಕಲಬುರಗಿ: ಹಾಡಹಗಲೇ ಕಲಬುರ್ಗಿಯಲ್ಲಿ ವಕೀಲನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಗುಲಬುರ್ಗ ವಿವಿ ಪೊಲೀಸರು ಬಂಧಿಸಿದ್ದು, ಬಂಧಿತರ ಸಂಖ್ಯೆ 3ಕ್ಕೇರಿದೆ.

Home add -Advt

ವಕೀಲ ಈರಣ್ಣಗೌಡ ಪೊಲೀಸ್ ಪಾಟೀಲ್ ಎಂಬುವವರನ್ನು ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ಬಂದು ಅಪಾರ್ಟ್ ಮೆಟ್ ಪಾರ್ಕಿಂಗ್ ನಲ್ಲಿ ಬರ್ಬರವಾಗಿ ಹತ್ಯೆ ಮಾಡಿದ್ದರು. ದುಷ್ಕರ್ಮಿಗಳು 20 ಬಾರಿ ಕೊಚ್ಚಿ ಕೊಲೆಗೈದಿರುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದೀಗ ಹತ್ಯೆಗೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ‌ ಠಾಣೆ ‌ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಉದನೂರು ಗ್ರಾಮದ ಮಲ್ಲಿನಾಥ ಬಸಣ್ಣ‌ (45), ಭಾಗಣ್ಣ ಅಲಿಯಾಸ್ ಭಗವಾನ್ (20), ಅವ್ವಣಪ್ಪ ಭಾಗವಂತರಾವ್ (48) ಬಂಧಿತರು.

ಜಮೀನು ವಿಚಾರವಾಗಿ ಸಬಂಧಿಕರೇ ಹತ್ಯೆ ಮಾಡಿದ್ದರು ಎಂದು ತಿಳಿದುಬಂದಿದೆ.


Related Articles

Back to top button