Belagavi NewsBelgaum NewsKannada NewsKarnataka News

ಬೆಳಗಾವಿಯಲ್ಲಿ​ ಸೋಮವಾರ ಗೀತಾ ಸಮನ್ವಯ 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ​ಎಲ್ಲಾ ಸಿದ್ಧಾಂತಗಳಿಗೆ ಮೂಲವಾದ ಶ್ರೀ ಭಗವದ್ಗೀತೆಯ ಮೇಲೆ ಎಲ್ಲಾ ಪಂಥಗಳ ವಿಚಾರ ಮಂಡನೆ ಮತ್ತು ಭಗವದ್ಗೀತೆಯೊಂದಿಗಿನ ಸಂಬಂಧದ ಬಗ್ಗೆ ವಿದ್ವಾಂಸರ ವಿದ್ವತ್ಪೂರ್ಣ ಪ್ರವಚನ ಮತ್ತು ಚಿಂತನ ವಿಚಾರಸಂಕಿರಣ ಬೆಳಗಾವಿಯಲ್ಲಿ ಸೋಮವಾರ (ಡಿ.18) ನಡೆಯಲಿದೆ.

 ಹಿಂದವಾಡಿಯ ಎ.ಸಿ.ಪಿ.ಆರ್ ಶ್ರೀಗುರುದೇವ ರಾನಡೆ ಮಂದಿರದಲ್ಲಿ ಅಂದು ಬೆಳಿಗ್ಗೆ 10.30ರಿಂದ ಸಂಜೆ 5ಘಂಟೆಯವರೆಗೆ ನಡೆಯಲಿರುವ ಕಾರ್ಯಕ್ರಮವನ್ನು ಭಗವದ್ಗೀತೆ ಅಭಿಯಾನದ ಗೌರವಾಧ್ಯಕ್ಷರೂ, ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರೂ ಆಗಿರುವ ಡಾ.ಪ್ರಭಾಕರ ಕೋರೆ ಉದ್ಘಾಟಿಸಲಿದ್ದಾರೆ. ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ.

ಡಾ. ವಿ. ಎಸ್. ಮಾಳಿ ವೀರಶೈವ ಸಿದ್ಧಾಂತ​ ಕುರಿತು, ಪ್ರೊ. ಆನಂದ ಆಳ್ವಾರ್ ರಾಮಾನುಜ ಸಿದ್ಧಾಂತ​ ಕುರಿತು, ​ಪಂ. ಶ್ರೀನಿಧಿ ಆಚಾರ್ ಜಮ್ನಿಸ್ ದ್ವೈತ ಸಿದ್ಧಾಂತ​ ಕುರಿತು,  ಡಾ. ಮಧುಸೂದನ ಶಾಸ್ತ್ರಿ ಹಂಪಿಹೊಳಿ ಅದ್ವೈತ ಸಿದ್ಧಾಂತ​ ಕುರಿತು, ಶ್ರೀ ನಾಗೇಂದ್ರ ದಾಸ್ ಇಸ್ಕಾನ್ ಸಾಹಿತ್ಯ ​ಕುರಿತು, ಶ್ರೀ ನಿತ್ಯಸ್ಥಾನಂದಾಜಿ ಶ್ರೀ ರಾಮಕೃಷ್ಣ ವಿವೇಕಾನಂದ ಸಾಹಿತ್ಯದ ಕುರಿತು ಮಾತನಾಡಲಿದ್ದಾರೆ.

ಮೈಸೂರಿನ ಡಾ. ಕೆ. ಎಲ್. ಶಂಕರ ನಾರಾಯಣ ಜೋಯಿಸ್ ಸಮಾರೋಪ ಭಾಷಣ ಮಾಡಲಿದ್ದಾರೆ.

​ 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button