ಡಾ.ಪ್ರಭಾಕರ್ ಕೋರೆ ಅವರಿಂದ 100 ಅಡಿ ಎತ್ತರದ ಧ್ವಜಾರೋಹಣ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಚಿಕ್ಕೋಡಿಯ ಕೆ ಎಲ್ ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ 73 ನೇಯ ಸ್ವಾತಂತ್ರ್ಯ ದಿನಚಾರಣೆಯ ಪ್ರಯುಕ್ತ 20 ಅಡಿ 30 ಅಳತೆಯ ಧ್ವಜ 100 ಅಡೀ ಎತ್ತರದ ಸ್ಥಂಬ ಹೊಂದಿದ ಧ್ವಜಾರೋಹಣ ನೆರವೇರಿಸಿ ಉದ್ಘಾಟಿಸಲಾಯಿತು.
ಈ ಧ್ವಜವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯಸಭಾ ಸದಸ್ಯ ಹಾಗೂ ಕೆ.ಎಲ್.ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆಯವರು, ನಮ್ಮ ದೇಶದಲ್ಲಿ ಪ್ರಪ್ರಥಮ ಬಾರಿಗೆ ಸ್ವಾತಂತ್ಯ್ರ ಚಳುವಳಿಯ ಕಿಡಿ ಹೊತ್ತಿಸಿ, ಬ್ರಿಟಿಷರ ವಿರುದ್ದ ಹೋರಾಡಿದ ಪ್ರಥಮ ಮಹಿಳೆ ನಮ್ಮ ಕರ್ನಾಟಕದ ಕಿತ್ತೂರು ರಾಣಿ ಚನ್ನಮ್ಮಾ. ನಮ್ಮ ದೇಶಕ್ಕೆ ಸ್ವಾತಂತ್ರ್ಯವು ಅನೇಕರ ಬಲಿದಾನದಿಂದ ಸಿಕ್ಕಿದ್ದು, ಕ್ರಾಂತಿಕಾರಿಗಳು ದೇಶಕ್ಕಾಗಿ ತಮ್ಮ ರಕ್ತವನ್ನು ಹರಿಸಿದ್ದಾರೆ, ಎಂದರು.
ಇಂದು ದೇಶದ ಭವಿಷ್ಯ ನಮ್ಮ ಯುವಕರ ಕೈಯಲ್ಲಿದೆ. ತಾವು ವಿದ್ಯಾಭ್ಯಾಸದ ನಂತರ ಕೇವಲ ನೌಕರಿಯ ಬೆನ್ನತ್ತದೇ, ತಮ್ಮದೇ ಆದ ಸ್ವಂತ ಉದ್ದಿಮೆಗಳನ್ನು ಆರಂಭಿಸಿ ಬೇರೆಯವರಿಗೆ ನೌಕರಿ ನೀಡುವಂತಾಗಬೇಕು ಎಂದರು.
ರಾಷ್ಟ್ರಧ್ವಜ ನಮ್ಮ ರಾಷ್ಟ್ರಪ್ರೇಮವನ್ನು ಹೆಚ್ಚಿಸುತ್ತದೆ. 100 ಅಡೀ ಎತ್ತರದ ಸ್ಥಂಬದ ಧ್ವಜ ಪ್ರತಿಯೋಂದು ಅಂಗ ಸಂಸ್ಥೆಯಲ್ಲಿ 24 ಗಂಟೆ ವರ್ಷದುದ್ದಕ್ಕೂ ಹಾರಬೇಕೆಂಬ ಕನಸ್ಸು ನನ್ನದಾಗಿದೆ. ಈ ನಿಟ್ಟಿನಲ್ಲಿ ಚಿಕ್ಕೋಡಿ ಈ ಮಹಾವಿದ್ಯಾಲಯದಲ್ಲಿ ಸ್ಥಾಪಿಸಿದ್ದೇವೆ. 1947 ರಿಂದ ಇಂದಿನವರೆಗೆ ಕಾಶ್ಮೀರ ತನ್ನದೇ ಆದ ಕಾನೂನು ಹೊಂದಿತ್ತು. ಇಂದು 370 ಮತ್ತು 35 ಕಲಂ ಮೋದಿಜಿಯವರು ಜಾರಿಗೆ ತಂದಿದ್ದು, ಪ್ರತಿಯೊಬ್ಬ ಭಾರತೀಯ ಕಾಶ್ಮಿರದಲ್ಲಿ ತನ್ನದೆ ಆದ ನಿವೇಶನ ತೆಗೆದುಕೊಂಡು ಅಲ್ಲಿ ನೆಲೆಸಬಹುದಾಗಿದೆ. ಮುಂಬರುವ ದಿನಗಳಲ್ಲಿ ನಮ್ಮ ಕೆ.ಎಲ್. ಇ ಸಂಸ್ಥೆಯು ಕೂಡ ತನ್ನ ಅಂಗಸಂಸ್ಥೆಯನ್ನು ಆರಂಭಿಸುವ ಆಶಯ ಹೊಂದಿದ್ದೇವೆ ಎಂದರು.
ಮಲಿಕವಾಡದ ಜೈ ಹಿಂದ ಮಾಜಿ ಸೈನಿಕರ ಸಮಿತಿ ಅಧ್ಯಕ್ಷರಾದ ಶ್ರೀ ಲಕ್ಷ್ಮಣ ವಂದೂರೆ ಮಾತನಾಡಿ –
ನಾವು ನಮ್ಮ ದೇಶಕ್ಕೆ ರುಣಿಯಾಗಿರಬೇಕು. ವಿದ್ಯಾರ್ಥಿಗಳು ತಾವು ದೇಶಕ್ಕಾಗಿ ಹೆಮ್ಮೆಯ ಜೀವನ ನಡೆಸುವ ಉದ್ದೇಶ ಹೊಂದಿದ್ದರೆ ರಕ್ಷಣಾಪಡೆಯಲ್ಲಿ ಸೇವೆ ಸಲ್ಲಿಸುವುದು ಸೂಕ್ತ ಎಂದು ಹೇಳಿದರು. ನಮ್ಮ ದೇಶದ ಸೈನ್ಯವನ್ನು ತಾಂತ್ರೀಕವಾಗಿ ಬಲಿಷ್ಟಗೊಳಿಸುವ ಜವಾಬ್ದಾರಿ ಈ ಯುವಪಳಿಗೆಯ ಕೈಯಲ್ಲಿದೆ ಎಂದರು.
ಮಾಜಿ ಸೈನಿಕರಾದ ಲಕ್ಷ್ಮಣ ವಂದೂರೆ, ಗಣಪತಿ ವಡಗಾವೆ, ಅಣ್ಣಾಸಾಬ ಪಾಟೀಲ, ಮಹಾದೇವ ಬಾಬು ಖೋತ, ದತ್ತಾತ್ರೇಯ ಸುತಾರ ಅವರನ್ನು ಸತ್ಕರಿಸಲಾಯಿತು.
ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ, ಕೆ. ಎಲ್. ಇ ಆಡಳಿತ ಮಂಡಳಿ ಸದಸ್ಯರಾದ ಬಿ. ಆರ್. ಪಾಟೀಲ, ಜಗದೀಶ ಕವಟಗಿಮಠ, ಗಣ್ಯರು, ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಚಿಕ್ಕೋಡಿಯ ಕೆ.ಎಲ್.ಇ ಅಂಗಸಂಸ್ಥೆಗಳ ವಿದ್ಯಾರ್ಥಿಗಳು, ಸಿಬ್ಬಂದಿ, ಪ್ರಾಚಾರ್ಯರು ಪಾಲ್ಗೋಂಡಿದ್ದರು.
ಪ್ರಾಚಾರ್ಯರಾದ ಡಾ. ಪ್ರಸಾದ ರಾಂಪೂರೆ ಸ್ವಾಗತಿಸಿದರು.
ವಿದ್ಯಾರ್ಥಿಗಳಾದ ಕು. ನಿಹಾಲ ಚರಾಟೆ, ಕು. ಅಕ್ಷತಾ ತೇಲಿ ಹಾಗೂ ಪಾಲಿಟೆಕ್ನೀಕ್ ಪ್ರಾಚಾರ್ಯರಾದ ಸಂದೀಪ ಕ್ಯಾತನವರ ಮಾತನಾಡಿದರು.
ಸುಮೇಧಾ ದೇಶ ಭಕ್ತಿಗೀತೆಯನ್ನು ಹಾಡಿದರು.
ಪ್ರೊ. ಸವಿತಾ ಮಾಳಿ, ಪ್ರೊ. ಗಂಗಾ ಅರಭಾವಿ ನಿರೂಪಿಸಿದರು.
ಪ್ರೊ. ವಿಶಾಲ ದಾನವಾಡೆ ಕಾರ್ಯಕ್ರಮವನ್ನು ಸಂಯೋಜಿಸಿದರು. ////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ