Kannada NewsKarnataka NewsLatestPolitics

*ಅವರಿಗೆ ಬೇಸಿಕ್ ಕಾಮನ್ ಸೆನ್ಸ್ ಆದರೂ ಬೇಡವೇ? ಗುಡುಗಿದ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ವಿಧಾನಸೌಧ ಕೊಠಡಿ ಸಂಖ್ಯೆ 106ರಲ್ಲಿ ಮತದಾನ ನಡೆಯುತ್ತಿದೆ.

ಈ ನಡುವೆ ಬಿಜೆಪಿ-ಜೆಡಿಎಸ್ ನಾಯಕರು ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪಗೆ ಕರೆ ಮಾಡಿರುವ ವಿಚಾರವಾಗಿ ಗುಡುಗಿದ ಡಿಸಿಎಂ ಡಿ.ಕೆ.ಶಿವಕುಮಾರ್, ಕಂಗ್ರೆಸ್ ಶಾಸಕರಿಗೆ ಆಮಿಷಗಳನ್ನು ಒಡ್ಡುತ್ತಿದ್ದಾರೆ. ನಮ್ಮ ಹಿರಿಯ ನಾಯಕರಾದ ಶಾಮನೂರು ಅವರಿಗೆ ಕರೆ ಮಾಡಿ ಮತ ಹಾಕಲು ಹೇಳುತ್ತಿದ್ದಾರೆ ಬಿಜೆಪಿ ನಾಯಕರಿಗೆ ಏನು ಹೇಳಬೇಕು? ರಾಜಕೀಯದಲ್ಲಿ ಬೇಸಿಕ್ ಕಾಮನ್ ಸೆನ್ಸ್ ಆದ್ರೂ ಬೇಡವೇ? ಎಂದು ಪ್ರಶ್ನಿಸಿದ್ದಾರೆ.

Home add -Advt

ಬರಿ ದುಡ್ದು, ಹಣ ಇದೆ ಎಂದು ಕುದುರೆ ವ್ಯಾಪಾರ ಮಾಡಿ ಆಪರೇಷನ್ ಕಮಲ ಮಾಡುವುದು ಸರಿಯಲ್ಲ. ನಮ್ಮ ಪಕ್ಷದಲ್ಲಿ ಗೆದ್ದು ಶಾಸಕರಾದವರು ಈಗ ಅಡ್ಡಮತದಾನ ಮಾಡಿದರೆ ತಮ್ಮ ಭವಿಷ್ಯ ಎನಾಗುತ್ತದೆ ಎಂಬ ಪ್ರಜ್ಞೆ ನಮ್ಮ ಎಲ್ಲಾ ಶಾಸಕರಿಗೂ ಇದೆ. ನೆಂಟಸ್ತನ, ಬೀಗತನ ಇದೆಲ್ಲ ಬೇರೆ, ರಾಜಕೀಯವೇ ಬೇರೆ ಎಂದು ಹರಿಹಾಯ್ದರು.


Related Articles

Back to top button